ನಟ ರಿಷಬ್ ಶೆಟ್ಟಿ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಕುಂದಾಪುರ:ಕನ್ನಡ ಚಿತ್ರರಂಗದ ಖ್ಯಾತ ನಟ ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಕಾಂತಾರ ರಿಷಬ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಶ್ರೀ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮ್ಮ ಕುಟುಂಬದವರೊಂದಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ದೇವಸ್ಥಾನದ ಅರ್ಚಕರಾದ ನಾಗೇಂದ್ರ ಭಟ್ ಅವರು ರಿಷಬ್ ಶೆಟ್ಟಿ ದಂಪತಿಗಳನ್ನು ಗೌರವಿಸಿದರು.ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಮಠ:ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಕುಂದಾಪುರ:ಮೂಡುಮಠ ಉಳ್ಳೂರು 11 ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಶ್ರೀಗೋಪಾಲ ಕೃಷ್ಣ ದೇವರಿಗೆ ತುಳಸಿ ಅರ್ಚನೆ,ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ,ಅನ್ನಸಂತರ್ಪಣೆ ಸೇವೆಯನ್ನು ನೆರವೇರಿಸಲಾಯಿತುಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆ,ಪುರುಷ ಹಾಗೂ ಮಹಿಳೆಯರಿಂದ ಮೊಸರು ಕುಡಿಕೆ,ಭಜನಾ ಕಾರ್ಯಕ್ರಮ,ಭಕ್ತಿ ಗೀತೆ,ನೃತ್ಯ ಕಾರ್ಯಕ್ರಮ ಜರುಗಿರು.ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.ದಾನಿಗಳನ್ನು ಗೌರವಿಸಲಾಯಿತು.ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದರು.ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮಾತನಾಡಿ,ಶ್ರೀ ಕೃಷ್ಣ […]

ನಾವುಂದ:ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

ಕುಂದಾಪುರ:ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ,ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ,ಮಹಾ ಪೂಜೆ,ಅನ್ನ ಸಂತರ್ಪಣೆ ಸೇವೆಯನ್ನು ನೆರವೇರಿಸಲಾಯಿತು.ಭಜನೆ,ಕೃಷ್ಣ ಜನನ ಕಾರ್ಯಕ್ರಮ ಜರುಗಿತು.ಬಾಲ ಕೃಷ್ಣ ವೇಷ ಸ್ಪರ್ಧೆ,ಹಗ್ಗಜಗ್ಗಾಟ,ಸಂಗೀತ ಮೊಸರು ಕುಡಿಕೆ ಒಡೆಯುವುದು ಹಾಗೂ ಓಕುಳಿ ಆಟ ಜರುಗಿತು.ಭಕ್ತರು ಶ್ರೀ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಶ್ರೀ ಕೃಷ್ಣ ದೇವರ ನಾಮಸ್ಮರಣೆಯನ್ನು ಕೊಂಡಾಡಿದರು.ಸತೀಶ್ […]

You cannot copy content of this page