ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ,ಬೃಹತ್ ಮಾನವ ಸರಪಳಿ ರಚನೆ

ಕುಂದಾಪುರ:ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕರ್ನಾಟಕ ಸರಕಾರ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಬೈಂದೂರು ತಾಲೂಕು ಆಡಳಿತ ಮತ್ತು ಕುಂದಾಪುರ ತಾಲೂಕು ಆಡಳಿತ,ತ್ರಾಸಿ ಮತ್ತು ಮರವಂತೆ ಪಂಚಾಯಿತಿ ಸಹಕಾರದೊಂದಿಗೆ ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‍ನಲ್ಲಿ ಮಾನವ ಸರಪಳಿ,ತಾಯಿಯ ಹೆಸರಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.ಸಂವಿಧಾನ ಪೀಠಿಕೆಯನ್ನು ಓದುವುದರ ಮುಖೇನ ಮಾನವ ಸರಪಳಿಯನ್ನು ರಚಿಸಲಾಯಿತು.ಕುಣಿತ ಭಜನೆ,ಚಂಡೆವಾದನ,ಯಕ್ಷಗಾನ ಮತ್ತು ಟ್ಯಾಬ್ಲೋ ವೇಷ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು.ಜಿಲ್ಲೆಯ ಗಡಿ ಭಾಗ ಶಿರೂರು ಗೇಟ್ […]

ಸೆ.16 ರಂದು ಆಲೂರಿನಲ್ಲಿ ಶೋಷಿತ ಸ್ವಾಭಿಮಾನಿ ಸಮಾವೇಶ

ಕುಂದಾಪುರ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ,ತಾಲೂಕು ಸಮಿತಿ ಕುಂದಾಪುರ ಅದರ ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಶೋಷಿತ ಸ್ವಾಭಿಮಾನಿ ಸಮಾವೇಶ (ದಲಿತ ಜನಗಳ ಕೊರಳ ಧ್ವನಿ) ಕಾರ್ಯಕ್ರಮ ಸೆ.16 ರ ಸೋಮವಾರ ದಂದು ಪೂರ್ವಾಹ್ನ 10 ಗಂಟೆಗೆ ಆಲೂರು ಮೂಕಾಂಬಿಕಾ ಸಭಾಭವನದಲ್ಲಿ ನಡೆಯಲಿದೆ.ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಹಾಗೂ ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು.ವಕೀಲರಾದ ಮಂಜುನಾಥ […]

ಗೋ ಕಳ್ಳರು ಅಂದರ್,ಪೊಲೀಸ್ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ರಾಮ ದೇವಸ್ಥಾನದ ಬಳಿ ನಿದ್ರಿಸುತ್ತಿದ್ದ ಜಾನುವಾರುಗಳನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿತರಾದ ಮೊಹಮ್ಮದ್ ಸೀನಾನ್ (19) ಗುಲ್ವಾಡಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನೊರ್ವನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ಆರ್ ಮತ್ತು ತಂಡದ ಸಿಬ್ಬಂದಿಗಳು ಗುಲ್ವಾಡಿಯಲ್ಲಿ ಶನಿವಾರ ಬಂಧಿಸಿದ್ದಾರೆ.ಸೆ.12 ರ ಬೆಳಗಿನ ಜಾವ 4.30 ರ ಸುಮಾರಿಗೆ ನಾಯಕವಾಡಿ ರಾಮ ದೇವಸ್ಥಾನದ ಬಳಿ ಮಲಗಿರುವ ಮೂರು ಗೋವುಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಸಿಸುತ್ತಿದ್ದ ಸಂದರ್ಭದಲ್ಲಿ […]

You cannot copy content of this page