ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಬೈಂದೂರು:ಡಾ.ಎಸ್‌.ರಾಧಾಕೃಷ್ಣನ್ ಅವರ ಜನ್ಮಜಯಂತಿ ಅಂಗವಾಗಿ ಉಡುಪಿ ಆದರ್ಶ ಚಾರಿಟೆಬಲ್ ಟ್ರಸ್ಟ್ ಕೊಡಮಾಡುವ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಬೈಂದೂರು ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ.ಆದರ್ಶ ಕಾಲೇಜ್ ಆಫ್ ನರ್ಸಿಂಗ್,ಆದರ್ಶ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್,ಆದರ್ಶ ಪ್ಯಾರಾ ಮಡೆಕಲ್ ಕಾಲೇಜ್,ಆದರ್ಶ ಆಸ್ಪತ್ರೆ ಉಡುಪಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಉಡುಪಿ ಅಲೆವೂರಿನ ಆದರ್ಶ ಸಮೂಹ ವಿದ್ಯಾಸಂಸ್ಥೆಗಳ ಸಂಕೀರ್ಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.

ಸೆ.10 ರಂದು ಕಟ್‍ಬೇಲ್ತೂರು ಪಂಚಾಯಿತಿ ಜಮಾಬಂದಿ

ಕುಂದಾಪುರ:ತಾಲೂಕಿನ ಕಟ್‍ಬೇಲ್ತೂರು ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಜಮಾ ಬಂದಿ ಸೆ.10 ರ ಮಂಗಳ ವಾರದಂದು ಪೂರ್ವಾಹ್ನ 10 ಗಂಟೆಗೆ ಕಟ್‍ಬೇಲ್ತೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜರುಗಲಿದೆ.ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ತಾಲೂಕು ಪಂಚಾಯಿತಿ ಕುಂದಾಪುರ ಅರುಣ್ ಕುಮಾರ್ ಶೆಟ್ಟಿ ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ.

ಓಂ ಗಣೇಶ ಯುವಕ ಸಂಘ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಳ್ವೆಗದ್ದೆ ಶಿರೂರು

ಕುಂದಾಪುರ:ಓಂ ಗಣೇಶ ಯುವಕ ಸಂಘ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಳ್ವೆಗದ್ದೆ ಶಿರೂರು ವತಿಯಿಂದ 20ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಅಳ್ವೆಗದ್ದೆ ಶ್ರೀಮಹಾಗಣಪತಿ ಸಭಾಭವನದಲ್ಲಿ ವಿಜೃಂಭಣೆಯಿಂದ ಶನಿವಾರ ನಡೆಯಿತು.ಶ್ರೀಗಣೇಶ ಚತುರ್ಥಿ ಕಾರ್ಯಕ್ರಮದ ಅಂಗವಾಗಿ ಶ್ರೀಗಣಪತಿ ದೇವರಿಗೆ ಗಣಹೋಮ,ಮಹಾಪೂಜೆ,ಮಂಗಳಾರತಿ ಸೇವೆಯನ್ನು ಸಲ್ಲಿಸಲಾಯಿತು.ಭಜನಾ ಕಾರ್ಯಕ್ರಮ,ಭಕ್ತಿ ರಸಮಂಜರಿ ಕಾರ್ಯಕ್ರಮ,ಅನ್ನದಾನ ಸೇವೆ,ಸಾಮೂಹಿಕ ಸತ್ಯನಾರಾಯಣ ಪೂಜೆ,ರಾರಾ ಮೆಲೋಡಿಸ್ ತಂಡವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿತು.ಭವ್ಯ ಮೆರವಣಿಗೆ ಮೂಲಕ ಶ್ರೀಗಣೇಶ ವಿಗ್ರಹವನ್ನು ಜಲಸ್ತಂಭ ಮಾಡಲಾಯಿತು.ಓಂ ಗಣೇಶ ಯುವಕ ಸಂಘ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ […]

You cannot copy content of this page