ದೇವರಿಗೆ ಅರ್ಪಿಸಿದ ಚಿನ್ನ ಕಳವುಗೈದ ಅರ್ಚಕ:ನಕಲಿ ಚಿನ್ನಾಭರಣವನ್ನು ದೇವರ ಮೂರ್ತಿ ಮೇಲೆ ತೋಡಿಸಿ ವಂಚನೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರಿಗೆ ಭಕ್ತರು ಅರ್ಪಿಸಿದ ಸುಮಾರು 264 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಗೈದಿರುವ ದೇವಳದ ಅರ್ಚಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಶಿರಸಿ ತಾಲೂಕಿನ ಮೂರೆಗಾರ ಸಾಲಕಣಿ ಗ್ರಾಮದ ನಿವಾಸಿ ನರಸಿಂಹ ಭಟ್ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.ಗಂಗೊಳ್ಳಿ ಶ್ರೀ ಮಾಹಾಂಕಾಳಿ ಅಮ್ಮನವರ ದೇವಳದಲ್ಲಿ ಅರ್ಚಕರಾಗಿ ಕೆಲಸವನ್ನು ನಿರ್ವಹಿಸಲು ಮಾಸಿಕ ಸಂಬಳದ ಆಧಾರದ ಮೇಲೆ ವಾಸಕ್ಕೆ ಬಾಡಿಗೆ ಮನೆಯನ್ನು ನೀಡಿ ಶಿರಸಿ ತಾಲೂಕಿನ ನರಸಿಂಹ ಭಟ್ ಅವರನ್ನು ದೇವಸ್ಥಾನದ ಆಡಳಿತ […]

ಲೆಫ್ಟಿನೆಂಟ್ ಭರತ್ ದೇವಾಡಿಗಗೆ ಸನ್ಮಾನ

ಕುಂದಾಪುರ:ದೇವಾಡಿಗರ ಸಮಾಜ ಸೇವಾ ಸಂಘ ಕುಂದಾಪುರ ವತಿಯಿಂದ ಭಾರತೀಯ ಸೇನೆಯಲ್ಲಿ ಲೆಫ್ಟಿಂನೆಂಟ್ ಆಗಿ ಸೇವೆಗೆ ಸೇರ್ಪಡೆಗೊಂಡ ಭರತ್ ಬಾಬು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕುಂದಾಪುರ ದೇವಾಡಿಗರ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ,ಗೌರವ ಅಧ್ಯಕ್ಷ ಚಂದ್ರಶೇಖರ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ದೇವಾಡಿಗ,ಮಾಜಿ ಅಧ್ಯಕ್ಷ ದತ್ತಾತ್ರೇಯ ದೇವಾಡಿಗ,ನಾರಾಯಣ ದೇವಾಡಿಗ,ಪ್ರಧಾನ ಕಾರ್ಯದರ್ಶಿ ಉದಯ್ ಹೇರಿಕೇರಿ,ಉಪಾಧ್ಯಕ್ಷ ಕರುಣಾಕರ ಬಳ್ಕೂರು,ರಾಜಾ ದೇವಾಡಿಗ ಟಿ ಟಿ, ಕೋಶಾಧಿಕಾರಿ ಆನಂದ ಕೆ ಏನ್ ಉಪಸ್ಥಿತರಿದ್ದರು.

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನಾಲ್ಕು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಬಾಲಕ- ಬಾಲಕಿಯರ ಕಂಬದಕೋಣೆ ಹೋಬಳಿ ಮಟ್ಟದ ಕ್ರೀಡಾಕೂಟ 2024-25 ದಲ್ಲಿ ಭಾಗವಹಿಸಿದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳಾದ ಅಬ್ದುಲ್ ಶಯಾನ್(7ನೇ ತರಗತಿ) ಉದ್ದ ಜಿಗಿತದಲ್ಲಿ ಪ್ರಥಮ, ಅಪೇಕ್ಷಾ (7ನೇ ತರಗತಿ) ಶಾರ್ಟಪುಟ್ ನಲ್ಲಿ ದ್ವಿತೀಯ, ಸುಹಾನ್(7ನೇ ತರಗತಿ) […]

You cannot copy content of this page