ಗೋ ಕಳ್ಳರು ಅಂದರ್,ಪೊಲೀಸ್ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ರಾಮ ದೇವಸ್ಥಾನದ ಬಳಿ ನಿದ್ರಿಸುತ್ತಿದ್ದ ಜಾನುವಾರುಗಳನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿತರಾದ ಮೊಹಮ್ಮದ್ ಸೀನಾನ್ (19) ಗುಲ್ವಾಡಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನೊರ್ವನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ಆರ್ ಮತ್ತು ತಂಡದ ಸಿಬ್ಬಂದಿಗಳು ಗುಲ್ವಾಡಿಯಲ್ಲಿ ಶನಿವಾರ ಬಂಧಿಸಿದ್ದಾರೆ.ಸೆ.12 ರ ಬೆಳಗಿನ ಜಾವ 4.30 ರ ಸುಮಾರಿಗೆ ನಾಯಕವಾಡಿ ರಾಮ ದೇವಸ್ಥಾನದ ಬಳಿ ಮಲಗಿರುವ ಮೂರು ಗೋವುಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಸಿಸುತ್ತಿದ್ದ ಸಂದರ್ಭದಲ್ಲಿ […]

ತ್ರಾಸಿ:ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಶುಭಾರಂಭ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರ ತ್ರಾಸಿ ಕೊಂಕಣ ಖಾರ್ವಿ ಸಭಾಂಗಣದ ಎದುರುಗಡೆ ನೂತನವಾಗಿ ನಿರ್ಮಾಣಗೊಂಡಿರುವ ಧನುಷ್ ಟವರ್ಸ್ ಹೋಟೆಲ್ ಪಿಜಿಬಿ ಬೀಚ್ ರೆಸಿಡೆನ್ಸಿ ಬೋಡಿರ್ಂಗ್ & ಲಾಡ್ಜಿಂಗ್‍ನಲ್ಲಿ ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಅದರ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು.ದ್ವಾರಕಾ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರ ನೇತೃತ್ವದಲ್ಲಿ ಗಣಹೋಮ,ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.ವಿಶ್ವ ಪ್ರಸಿದ್ಧ ಪ್ರಮುಖ […]

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ:ಮಾನವ ಸರಪಳಿ:ಪೂರ್ವಭಾವಿ ಸಭೆ

ಕುಂದಾಪುರ:ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ. 15 ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ಬೈಂದೂರು ತಾಲೂಕು ಸೌಧದಲ್ಲಿ ಮಂಗಳವಾರ ನಡೆಯಿತು.ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಸಂಘ ಸಂಸ್ಥೆಗಳ ಸದಸ್ಯರು,ಶಾಲಾ ಕಾಲೇಜುಗಳ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮವು ರಾಜ್ಯದಾದ್ಯಂತ ಬೆಳಿಗ್ಗೆ 9.30ರಿಂದ 10.30ರ ವರೆಗೆ ನಡೆಯಲಿದ್ದು,ಬೈಂದೂರು ತಾಲೂಕಿನ ಶಿರೂರು ಗೇಟ್‌ನಿಂದ ತ್ರಾಸಿ ತನಕ ಜರುಗಲಿದೆ.ಸೆ.14 ರಿಂದ ಅಕ್ಟೋಬರ್ ತಿಂಗಳ ವರೆಗೆ ಸ್ವಚ್ಛತಾ ಆಂದೋಲನ ಜಾರಿಯಲ್ಲಿರುವುದರಿಂದ ಸ್ವಭಾವ […]

You cannot copy content of this page