ಸಂಬಂಧಿ ಮಹಿಳೆಯೊಬ್ಬರಿಗೆ ಯಕೃತ್ತು ದಾನ ಮಾಡಿ, ಇಹಲೋಕ ತ್ಯಜಿಸಿದ ಮಹಿಳೆ
ಕುಂದಾಪುರ: ಅನಾರೋಗ್ಯ ಪೀಡಿತರಾದ ಕುಟುಂಬದಲ್ಲಿನ ಸಂಬಂಧಿ ಮಹಿಳೆಯೊಬ್ಬರಿಗೆ ಯಕೃತ್ತು ದಾನ ಮಾಡಿದ ಅಂಕಿತಾ (ಅರ್ಚನಾ) ಕಾಮತ್ ಅವರು ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಿದ ಮನಕಲಕುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಕುಂದಾಪುರ ತಾಲೂಕಿನ ಕೋಟೇಶ್ವರ ಸತೀಶ ಕಾಮತ್ ಅವರ ಸೊಸೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಚೇತನ್ ಕಾಮತ್ ಅವರ ಪತ್ನಿ ಅಂಕಿತಾ (ಅರ್ಚನಾ) ಕಾಮತ್ (33) ಅವರ ಸಂಬಂಧಿಕ ಮಹಿಳೆಯೊಬ್ಬರಿಗೆ ಯಕೃತ್ತಿನ (ಲಿವರ್) ಸಮಸ್ಯೆ ಇರುವುದರಿಂದ ಲಿವರ್‌ನಕಸಿ ಮಾಡಲು ತನ್ನ ಲಿವರ್‌ನ್ನೇ […]