ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆ ಮುರಿದು ಬಿದ್ದು:ಸವಾರನಿಗೆ ಗಾಯ

ಕುಂದಾಪುರ:ಸ್ಕೂಟರ್ ನಲ್ಲಿ ಗಂಗೊಳ್ಳಿ ಯಿಂದ ತ್ರಾಸಿ ಕಡೆಗೆ ಸಾಗುತ್ತಿದ್ದಾಗ ತ್ರಾಸಿ ಹೋಲಿ ಕ್ರಾಸ್ ಸಮೀಪ ಸ್ಕೂಟರ್ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಸ್ಕೂಟರ್ ಸವಾರ ಗಂಗೊಳ್ಳಿ ನಿವಾಸಿ,ಮಸೀದಿ ಧರ್ಮಗುರು ಜನಾಬ್ ಮೌಲಾನ ಮುಹಮ್ಮದ್ ಮತೀನ್ ಸಾಹಬ್ ಸಿದ್ದಿಕಿ (51) ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಿದ್ದಾರೆ.ತಲೆ ಹಾಗೂ ಕುತ್ತಿಗೆಗೆ ಗಾಯವಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆರೆಗೆ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವು

ಬೈಂದೂರು:ಕೆರೆಗೆ ಈಜಲೆಂದು ತೆರಳಿದ ಬೈಂದೂರು ತಾಲೂಕಿನ ಯೋಜನಾ ನಗರದ ನಿವಾಸಿ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಹತ್ತಿರದ ನಿವಾಸಿ ಶಾನು ಮೊಹ್ಮದ್ ಶಫಾನ್ (13) ಎಂಬ ವಿದ್ಯಾರ್ಥಿಗಳಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.ಪರೀಕ್ಷೆ ಮು‌ಗಿಸಿ ಕೊಂಡು ಶಾಲೆಯಿಂದ ಮನೆಗೆ ಬಂದಿದ್ದ ವಿದ್ಯಾರ್ಥಿಗಳಿಬ್ಬರು ಬೈಂದೂರು ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದಾರೆ.ಅಷ್ಟೇನು ಈಜಲು ಬಾರದ ಯುವಕರಿಬ್ಬರು ಆಯತಪ್ಪಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ.ಸಂಚೆ ತನಕವೂ ಮಕ್ಕಳು ಮನೆ ಬಾರದೆ ಇರುವುದನ್ನು ಗಮನಿಸಿದ ಹೆತ್ತವರು, […]

ಶಾಲಾ ವಾಹನ ಬೈಕ್ ಗೆ ಡಿಕ್ಕಿ:ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಸಮೀಪ ಬಡಾಕೇರಿ ಮುಖ್ಯರಸ್ತೆಯಲ್ಲಿ ಕುಂದಾಪುರ ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಶಾಲಾ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬಸ್ಸಿನ ಚಕ್ರದಡಿಗೆ ಸಿಲುಕಿ ಕೊಂಡಿದ್ದು ಸಂಪೂರ್ಣ ಹಾನಿಯಾಗಿದೆ.ಬೈಕ್ ಸವಾರ ನಾಗೇಶ್ ಮೊಗವೀರ (34) ರಸ್ತೆ ಪಕ್ಕದಲ್ಲಿದ್ದ ಗದ್ದೆಗೆ ಹಾರಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಂಗಳವಾರ ಮಧ್ಯಾಹ್ನದ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಕರೆತರುವ ಸಮಯದಲ್ಲಿ ನಾವುಂದ ಸಮೀಪ ಬಡಾಕೆರೆಯಲ್ಲಿ ಬೈಕ್ ಡಿಕ್ಕಿ ಹೊಡೆದಿದೆ.ಶಾಲಾ ವಾಹನ ಚಾಲಕನ ಅಜಾಗರುಕತೆ ಯಿಂದ […]

You cannot copy content of this page