ಕಾರಿನ ಬಾನೆಟ್‌ ಒಳಗೆ ಬೃಹತ್‌ ಹೆಬ್ಬಾವು ಪತ್ತೆ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಶೆಟ್ಟಿ ಎಂಬುವರಿಗೆ ಸೇರಿದ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆ ಆದ ಘಟನೆ ಗುರುವಾರ ನಡೆದಿದೆ.ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರ ದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿತಾರಣ್ಯಕ್ಕೆ ಬಿಡಲಾಯಿತು.ಹೊರಗಡೆ ತೆರಳುವ ಉದ್ದೇಶದಿಂದ ಮನೆಯಲ್ಲಿ ನಿಲ್ಲಿಸಿದ ಕಾರನ್ನು ಚಲಾಯಿಸಿ ಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಶಬ್ಧ ಬರುತ್ತಿರುವುದನ್ನು ಗಮನಿಸಿದಚಂದ್ರ ಶೆಟ್ಟಿ ಅವರು ಕಾರಿನ ಬೊನೆಟ್ ತೆರೆದು ನೋಡಿದಾಗ ಹೆಬ್ಬಾವು ಪ್ರತ್ಯೇಕವಾಗಿದೆ.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮೀನಾರಾಯಣ ನಿಧನ

ಕುಂದಾಪುರ:ಬೈಂದೂರು ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮೀನಾರಾಯಣ ಅವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.ಮೂರು ಬಾರಿ ಬೈಂದೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ ಮಾಜಿ ಶಾಸಕ ಲಕ್ಷ್ಮೀನಾರಾಯಣ ಅವರು.ಕೆ.ಗೋಪಾಲ ಪೂಜಾರಿ ವಿರುದ್ಧ ಸತತವಾಗಿ ಎರಡು ಬಾರಿ ಸೋತಿದ್ದರು.ತಮ್ಮ ಮೂರನೇ ಪ್ರಯತ್ನದಲ್ಲಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿ.ಆಗಿನ ಹಾಲಿ ಶಾಸಕರಾಗಿದ್ದ ಕೆ.ಗೋಪಾಲ ಪೂಜಾರಿ ಅವರ ವಿರುದ್ಧ ಗೆದ್ದು ಬಿಗಿದಿದ್ದರು.ಜನರಪರ ಕೆಲಸ ಕಾರ್ಯಗಳ ಮೂಲಕ ಮನೆ ಮಾತಾಗಿದ್ದ ಮಾಜಿ ಶಾಸಕ ಲಕ್ಷ್ಮೀನಾರಾಯಣ ಅವರ ನೆನಪನ್ನು ಬೈಂದೂರು ಕ್ಷೇತ್ರದ ಜನರು […]

ಕೊಲ್ಲೂರು:ಪಿಕಪ್ ಬಸ್ ನುಡುವೆ ಪರಸ್ಪರ ಡಿಕ್ಕಿ,ಬಸ್ ಪಲ್ಟಿ

ಕುಂದಾಪುರ:ಕೊಲ್ಲೂರು ರಾಜ್ಯ ಹೆದ್ದಾರಿ ಜನ್ನಾ ಯಲು ಸಮೀಪ ಖಾಸಗಿ ಬಸ್ ಹಾಗೂ ಒಣ ಮೆಣಸು ತುಂಬಿದ್ದ ವಾಹನದ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ.ಬಸ್ ಪಲ್ಟಿಆಗಿದ್ದ ಘಟನೆ ಬುಧವಾರ ನಡೆದಿದೆ.ಶಾಲಾ ವಿದ್ಯಾರ್ಥಿಗಳು ಸೇರಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ.ಮೆಣಸು ತುಂಬಿದ ಪಿಕಪ್ ವಾಹನದ ಚಾಲಕ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

You cannot copy content of this page