ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ ನಿಧನ

ಕುಂದಾಪುರ:ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ(83) ನಿನ್ನೆ ಶನಿವಾರ ನಿಧನ ಹೊಂದಿದರು.ಮುಂಡ್ಕೂರು ಕೃಷ್ಣ ಶೆಟ್ಟಿಯವರಲ್ಲಿ ಹೆಜ್ಜೆಗಾರಿಕೆ ಕಲಿತು ಮುಂಡ್ಕೂರು ಮೇಳದಲ್ಲಿ ಹವ್ಯಾಸಿ ವೇಷಧಾರಿಯಾಗಿ,ಮುಂದೆ ಉದ್ಯೋಗ ನಿಮಿತ್ತ ಮುಂಬಯಿ ಸೇರಿ ಯಕ್ಷಗಾನಾಸಕ್ತಿಯಿಂದ ಮತ್ತೆ ಊರಿಗೆ ಬಂದು ಕಟೀಲು ಮೇಳ ಸೇರಿದರು.ಬೆಳ್ಮಣ್ಣು ಮತ್ತು ಬಪ್ಪನಾಡು ಮೇಳಗಳಲ್ಲೂ ಕೆಲವು ತಿರುಗಾಟ ಮಾಡಿದ್ದರು.ಪೀಠಿಕಾ ಮತ್ತು ಒಡ್ಡೋಲಗದ ಪಾತ್ರಗಳಿಂದ ಆರಂಭಗೊಂಡ ಇವರ ಯಕ್ಷಪಯಣ ಮುಂದೆ ಹವ್ಯಾಸಿ ಸಂಘಸಂಸ್ಥೆಗಳ ಆಟಗಳಲ್ಲಿ ಅತಿಕಾಯ, ರಕ್ತಬೀಜದಂತಹ ಪ್ರಮುಖ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವಷ್ಟು ಪ್ರೌಢತೆ ಸಾಧಿಸಿತ್ತು. […]

ಬುಲ್ ಟ್ರಾಲ್ ಫಿಶಿಂಗ್ ಬೋಟ್ ಅಡ್ಡಗಟ್ಟಿದ ಮೀನುಗಾರರು

ಕುಂದಾಪುರ:ಬೈಂದೂರು ವಲಯ ನಾಡ ದೋಣಿ ಮತ್ತು ಗಂಗೊಳ್ಳಿ ನಾಡ ದೋಣಿ ಮೀನುಗಾರರು ಒಂದುಗೂಡಿ ಸುಮಾರು ನೂರಕ್ಕೂ ಹೆಚ್ಚು ದೋಣಿಯವರು ಬುಲ್ಟ್ರೋಲ್ ಮಾಡುತ್ತಿರುವ ಬೋಟಗಳನ್ನು ತಡೆದು ನಿಲ್ಲಿಸಿ ತಮ್ಮ ಅಕ್ರೋಶವನ್ನು ಹೊರಗೆ ಹಾಕಿದ್ದಾರೆ.ಸಮುದ್ರದ ತೀರಪ್ರದೇಶದಲ್ಲಿ ಬುಲ್ ಟ್ರಾಲ್ ಫಿಶಿಂಗ್ ಮಾಡುವುದರಿಂದ ಮೀನುಗಳ ಸಂತತಿ ನಾಶವಾಗುವುದರಲ್ಲಿ ಸಂಶಯವಿಲ್ಲಬುಲ್‌ಟ್ರಾಲ್‌ ಲೈಟ್‌ ಫಿಶಿಂಗ್‌ನಿಂದ ನಾಡದೋಣಿ ಮೀನುಗಾರರ ಜೀವನಕ್ಕೆ ತೊಂದರೆಯಾಗಿದೆ.ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದರೆ ಬರಿಗೈಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಬಾಹಿರವಾಗಿ ಮೀನುಗಾರಿಕೆಗೆ ಮಾಡುತ್ತಿರುವರ ಬುಲ್ ಟ್ರಾಲ್ ಬೋಟ್ ಗಳ ವಿರುದ್ಧ […]

ಮರವಂತೆ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ

ಬೈಂದೂರು:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಇದರ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಅವರು ಮಾತನಾಡಿ,ಸಂಘದ ಆರ್ಥಿಕ ಚಟುವಟಿಕೆ ಮತ್ತು ಬೆಳವಣಿಗೆಯ ಅಭಿವೃದ್ಧಿ ಕುರಿತು ವಾರ್ಷಿಕ ವರದಿಯನ್ನು ಮಂಡಿಸಿದರು.ಹಿಂದಿನ ಮಹಾಸಭೆ ನಡವಳಿಕೆಯನ್ನು ಓದಿ ಹೇಳಿದರು.ಸಂಘದ ಲೆಕ್ಕಿಗ ರೇಖಾ ಅವರು ನಿವ್ವಳ ಲಾಭದ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು […]

You cannot copy content of this page