ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ,ಬೆಂಕಿ ಇಲ್ಲದೆ ಆಹಾರ ತಯಾರಿ ಕಾರ್ಯಕ್ರಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಆಹಾರ ತಂತ್ರಜ್ಞಾನ ವಿಭಾಗದಿಂದ ನಿಸರ್ಗದತ್ತವಾಗಿ ದೊರೆಯುವ ಬಣ್ಣವನ್ನು ಬಳಸಿ ಅಂದರೆ ಹೂವು,ಹಣ್ಣು,ತರಕಾರಿಗಳನ್ನು ಬಳಸಿ ಹೊಸ ಬಗೆಯ ವರ್ಣರಂಜಿತ ಆಹಾರ ಪದಾರ್ಥಗಳನ್ನು ಬೆಂಕಿ ಇಲ್ಲದೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಅರಿವುಮೂಡಿಸುವ ಸಲುವಾಗಿ ಹಾನಿಕಾರಕ ಬಣ್ಣವನ್ನು ಬಳಸದೆ ಸಹಜವಾಗಿ ಸಿಗುವ ಬಣ್ಣಗಳಿಂದ ಹೊಸ ಬಗೆಯ ಪಾನೀಯ,ತಿಂಡಿ ತಿನಿಸುಗಳನ್ನು ತಯಾರಿಸಿ ಅದರ ಮಹತ್ವವನ್ನು ತಿಳಿಸಿದರು .ಕಾಲೇಜಿನ ಸಂಸ್ಥಾಪಕ ಸುಬ್ರಮಣ್ಯ ,ಕಾಲೇಜಿನ ನಿರ್ದೇಶಕಿ ಮಮತಾ ಹಾಗೂ ಪ್ರಿನ್ಸಿಪಾಲ್ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಉಪನ್ಯಾಸಕರಾದ […]

ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಭೆ:8% ಡಿವಿಡೆಂಡ್ ಘೋಷಣೆ

ಕುಂದಾಪುರ:ಬೈಂದೂರು ಅರ್ಬನ್ ಸೌಹಾರ್ದಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಭೆ ಸಂಘದ ಅಧ್ಯಕ್ಷರಾದ ಮಣಿಕಂಠ ಎಸ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ.ಬೈಂದೂರು ಸರಕಾರಿ ಪದವಿ ಪೂರ್ವ ಕಾಲೀಜಿಗೆ ಶೈಕ್ಷಣಿಕ ಸಹಾಯ ಧನ ವಿತರಣೆ.ನಿವೃತ್ತ ಸರಕಾರಿ ಉದ್ಯೋಗಿಗಳಿಗೆ ಸನ್ಮಾನ.ಸಾಧನೆಗೈದಿರುವ ಸಂಘದ ಸ್ವ ಸಹಾಯ ಸಂಘದ ಸದಸ್ಯರಿಗೆ ವಿಶೇಷ ಬಹುಮಾನಗಳನ್ನು ನೀಡುತ್ತಾ ಬಂದಿರುವ ಸಂಘವು,ಕೊರೊನಾ ಸಂದರ್ಭದಲ್ಲಿ ಅಶಕ್ತರಿಗೆ ಆಹಾರ ಕಿಟ್ ವಿತರಣೆ,ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಹಸ್ತ, ಬೈಂದೂರೂಪೊಲೀಸ್ ಠಾಣೆಗೆ ನಾಲ್ಕು […]

ಕಾರಿನ ಬಾನೆಟ್‌ ಒಳಗೆ ಬೃಹತ್‌ ಹೆಬ್ಬಾವು ಪತ್ತೆ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಶೆಟ್ಟಿ ಎಂಬುವರಿಗೆ ಸೇರಿದ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆ ಆದ ಘಟನೆ ಗುರುವಾರ ನಡೆದಿದೆ.ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರ ದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿತಾರಣ್ಯಕ್ಕೆ ಬಿಡಲಾಯಿತು.ಹೊರಗಡೆ ತೆರಳುವ ಉದ್ದೇಶದಿಂದ ಮನೆಯಲ್ಲಿ ನಿಲ್ಲಿಸಿದ ಕಾರನ್ನು ಚಲಾಯಿಸಿ ಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಶಬ್ಧ ಬರುತ್ತಿರುವುದನ್ನು ಗಮನಿಸಿದಚಂದ್ರ ಶೆಟ್ಟಿ ಅವರು ಕಾರಿನ ಬೊನೆಟ್ ತೆರೆದು ನೋಡಿದಾಗ ಹೆಬ್ಬಾವು ಪ್ರತ್ಯೇಕವಾಗಿದೆ.

You cannot copy content of this page