ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣವಾಗಿ ಕುತ್ಲೂರು ಗ್ರಾಮ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು:ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ವರ್ಷಂಪ್ರತಿ ನಡೆಯುವ ಅತ್ಯುತ್ತಮ ಪ್ರವಾಸಿ ಹಳ್ಳಿಗಳು ಸ್ಪರ್ಧೆಯಲ್ಲಿ ದ.ಕ ಜಿಲ್ಲೆಯ,ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವು ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದು ಕೊಂಡಿದೆ.ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯದ ಕಾರ್ಯಕ್ರಮದಲ್ಲಿ ಇವೊಂದು ಪ್ರಶಸ್ತಿಯನ್ನು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್,ಪ್ರಧಾನಿ ನರೇಂದ್ರ ಮೋದಿ,ಪ್ರವಾಸೋದ್ಯಮ ಇಲಾಖೆಯ ಸಚಿವರು ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಕುತ್ಲೂರು ಗ್ರಾಮಸ್ಥರಾದ ಹರೀಶ್ ಡಿ. ಸಾಲ್ಯಾನ್ ಮತ್ತು ಶಿವರಾಜ್ ಅಂಚನ್ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ […]

ತಮಿಳುನಾಡು ನಾಮಕ್ಕಲ್‌ ಪೊಲೀಸರ ಸಿನಿಮೀಯ ಕಾರ್ಯಾ‍ಚರಣೆ:ದರೋಡೆಕೋರರ ಬಂಧನ

ಬೆಂಗಳೂರು:ತ್ರಿಶೂರ್ ನ ಮೂರು ಎಟಿಎಂಗಳಲ್ಲಿ ದರೋಡೆ ನಡೆಸಿದ ಹರಿಯಾಣಾದ ದರೋಡೆ ಕೋರರನ್ನು ಬಂಧಿಸಿದ್ದಾರೆ.ಗುಂಡೇಟು ತಗಲಿ ಒಬ್ಬ ಸಾವನ್ನಪ್ಪಿದ್ದಾರೆ. ಒಬ್ಬನಿಗೆ ಗಾಯವಾಗಿದ್ದು, ಇಬ್ಬರು ಪೊಲೀಸರಿಗೆ ಇರಿತವಾಗಿದೆ.ಕಾರು ನಗದು ತುಂಬಿದ್ದ ಕಂಟೇನರ್ ಲಾರಿ ವಶ ಪಡಿಸಿಕೊಂಡಿದ್ದಾರೆ.

ಈಜಲು ಹೋದ ಇಬ್ಬರು ನೀರುಪಾಲು

ಮಂಗಳೂರು:ಮರವೂರು ಪಲ್ಗುಣಿ ನದಿಯಲ್ಲಿ ಈಜಲು ಹೋದ ಮಂಗಳೂರಿನ ಇಬ್ಬರು ನೀರುಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ಎಂದು ಗುರುತಿಸಲಾಗಿದೆ.ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆ ಬಳಿ ಪಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ಹೋಗಿದ್ದು ಕೋಡಿಕಲ್ ನಿವಾಸಿಗಳಾದ ಅರುಣ್ ಹಾಗೂ ದೀಕ್ಷಿತ್ ಅಪಾಯವಿಲ್ಲದೆ ಬಚಾವಾಗಿದ್ದಾರೆ.ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಆಗಮಿಸಿದ್ದು ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ […]

You cannot copy content of this page