ಧರೆಗುರುಳಿದ ಮಹಾರಾಜ ಸ್ವಾಮಿ ದೇವಸ್ಥಾನದ ಪ್ರಾಂಗಾಣದ ಸೀಟ್ ಮಾಡು

ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ ಕೆಳಕ್ಕೆ ಬಿದ್ದಿದೆ.ಮಳೆ ನೀರು ದೇವಾಲಯದ ಒಳಗಡೆ ಸುರಿಯುತ್ತಿದೆ.ಕರ್ಕಾಟಕ ಅಮಾವಾಸ್ಯೆ ಜಾತ್ರೆಕ್ಕೆಂದು ಹೊರಗಡೆ ಹಾಕಿದ ಕಬ್ಬಿಣದ ಸೀಟ್ ಚಪ್ಪರ ಗಾಳಿ ಹೊಡೆತಕ್ಕೆ ತುಂಡರಸಿ ಕೆಳಗೆ ಬಿದ್ದಿದ್ದು.ಚಪ್ಪರಕ್ಕೆ ಹಾಕಿದ ಕಬ್ಬಿಣದ ಸೀಟ್ ಚೆಲ್ಲಾಪಿಲ್ಲಿಯಾಗಿವೆ.

ಗಾಳಿ ಆರ್ಭಟಕ್ಕೆ ನಲುಗಿದ ಕುಂದಾಪ್ರ

ಕುಂದಾಪುರ:ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿದ ಗಾಳಿ ಅಬ್ಬರಕ್ಕೆ ಅಕ್ಷರಹ ಸಹ ಕುಂದಾಪ್ರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳು ನಲುಗಿವೆ.ಆರ್ಭಟಿಸಿದ ಗಾಳಿ ಹೊಡೆತಕ್ಕೆ ಹಲವಾರು ಕಡೆ ವಿದ್ಯುತ್ ಕಂಬಗಳು,ಮರಗಳು ನೆಲಕ್ಕೆ ಉರುಳಿ ಬಿದ್ದಿವೆ.ಗಾಳಿ ರಭಸಕ್ಕೆ ಪೇಟೆಯಲ್ಲಿ ಅಂಗಡಿಗಳ ಬೋರ್ಡ್ ಮುರಿದು ಬಿದ್ದಿದೆ.ಮನೆಗಳ ಮೇಲೆ ಮರ ಬಿದ್ದು ವ್ಯಾಪಕ ಹಾನಿ ಉಂಟಾಗಿದ್ದು.ವಿದ್ಯುತ್ ಸರಬರಾಜಿಗೆ ತೊಂದರೆ ಉಂಟಾಗಿತ್ತು.ಸಂಜೆಯಾಗುತ್ತಲೆ ನದಿಗಳ ನೀರಿನ ಮಟ್ಟ ಏರಿಕೆ ಆಗಿದೆ.

ಗಾಳಿ ಅಬ್ಬರಕ್ಕೆ ಧರೆಗುರುಳಿದ ವಿದ್ಯುತ್ ಕಂಬ:50 ಕ್ಕೂ ಹೆ0ಚ್ಚು ಕಂಬಕ್ಕೆ ಹಾನಿ

ಕುಂದಾಪುರ:ಏಕಏಕಿ ಶನಿವಾರ ಸಂಜೆ ಬೀಸಿದ ಭಾರಿ ಗಾಳಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಒಳಪಟ್ಟಿರುವ ತಲ್ಲೂರು ಉಪವಿಭಾಗದ ವ್ಯಾಪ್ತಿಯಲ್ಲಿನ ಹೆಮ್ಮಾಡಿ,ದೇವಲ್ಕುಂದ,ಆಲೂರು,ಬಡಾಕೆರೆ,ಗಂಗೊಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಒಟ್ಟು 45 ರಿಂದ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

You cannot copy content of this page