ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘ ತಲ್ಲೂರು, ವಿದ್ಯಾರ್ಥಿ ವೇತನ ವಿತರಣೆ

ಕುಂದಾಪುರ:ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘ ತಲ್ಲೂರು ವತಿಯಿಂದ ಸಂಘದ ಎ ಕ್ಲಾಸ್ ಸದಸ್ಯರ ಮಕ್ಕಳಿಗೆ ಮತ್ತು ಸ್ವರಸಿಂಚನ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಅಕ್ಟೋಬರ್ 13 ಭಾನುವಾರ ಬೆಳಿಗ್ಗೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಲಿದ್ದಾರೆ.ನಿವೃತ ಕ್ಯಾಪ್ಟನ್ ಭಾರತೀಯ ಸೇನೆ ರಾಜೇಶ್ ದೇವಾಡಿಗ ಅವರನ್ನು ಸಂಘದ ವತಿಯಿಂದ ಸನ್ಮಾನಮಾಡಲಿದ್ದು, ಮಹಾಲಿಂಗ ದೇವಾಡಿಗ, ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ,ಸಹಕಾರಿ ಸಂಘಗಳ ಸಹಾಯಕ […]

ಕೆಂದಾವರೆ ಚಲನಚಿತ್ರ,ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಕುಂದಾಪುರ:ವಿನೋದ್ ಕುಮಾರ್.ಪಿ ಅವರ ಪರಿಕಲ್ಪನೆಯಡಿ ಮೂಡಿ ಬಂದಿರುವ ಜ್ಯೋತಿ ಜೀವನ್ ಸ್ವರೂಪ್ (ಶಯದೇವಿಸುತೆ) ಮರವಂತೆ ಅವರ ಹೊಸ ಮಹಾ ಕಾದಂಬರಿ ಕೆಂದಾವರೆ ಕನ್ನಡ ಚಲನಚಿತ್ರಕ್ಕೆ ಆಯ್ಕೆಯಾಗಿದೆ.ಅಪ್ರಮೇಯ ಫಿಲಂಸ್ ಅವರ ಪ್ರೊಡಕ್ಷನ್ ನಲ್ಲಿ ಕೆಂದಾವರೆ ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ.ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಪುನೀತ್‍ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಕೆಂದಾವರೆ ಚಲನಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಬಡಾಕೆರೆ:ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಸಮೀಪ ಸೌಪರ್ಣಿಕಾ ನದಿ ಮೇಲೆ ಹಾದು ಹೋಗಿರುವ ಕೊಂಕಣ ರೈಲು ಬ್ರಿಡ್ಜ್ ಮೇಲೆ ಅಂದಾಜು ಐದು ವರ್ಷ ಪ್ರಾಯವನ್ನು ಹೊಂದಿರುವ ಬೃಹತ್ ಗಾತ್ರದ ಗಂಡು ಚಿರತೆಯೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.ಬೆಳಗಿನ ಜಾವ 4.40 ರ ಸುಮಾರಿಗೆ ಇವೊಂದು ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ.ಉಪ ವಲಯ ಅರಣ್ಯಾಧಿಕಾರಿಗಳಾದ ಪೂರ್ಣಚಂದ್ರ ಮತ್ತು ಸೆಲ್ವ ಮುರುಗನ್,ಅರಣ್ಯ ವೀಕ್ಷಕ ಸುರೇಶ್,ಗಸ್ತು ಅರಣ್ಯ ಪಾಲಕರಾದ ಮಂಜುನಾಥ ನಾಯಕ್ ಮತ್ತು ರಮೇಶ್ ಹಾಗೂ ನಾಡ […]

You cannot copy content of this page