ಅಬ್ಬರಿಸಿದ ಮಳೆಗೆ ಉಕ್ಕೇರಿದ ಕಡಲು:ಜನರಲ್ಲಿ ಮೂಡಿದ ಆತಂಕ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕಡಲು ಉಕ್ಕೇರಿದ ಪರಿಣಾಮ ಕಂಚುಗೋಡು ಭಾಗದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದೆ.ಅಲೆಗಳ ಹೊಡೆತಕ್ಕೆ ತೀರ ಪ್ರದೇಶದಲ್ಲಿ ಲಂಗರು ಹಾಕಿದ ದೋಣಿಗಳಿಗೆ ಹಾನಿ ಉಂಟಾಗಿದೆ.ಸಮುದ್ರ ನೀರು ಮನೆಗಳಿಗೂ ನುಗ್ಗಿದ್ದು ಜನರ ನಿದ್ದೆಗೆಡಿಸಿದೆ.ಏಕಾಏಕಿ ಹವಾಮಾನದಲ್ಲಿ ಏರುಪೇರು ಉಂಟಾಗಿದ್ದರಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗದ ಪ್ರದೇಶದಲ್ಲಿ ಮಳೆ ಅಬ್ಬರಿಸಿ ಸುರಿದಿದೆ.ಸಮುದ್ರ ಅಲೆಗಳು ತೀರಾ ಪ್ರದೇಶದತ್ತ ನುಗ್ಗಿದ್ದರಿಂದ ಕಂಚುಗೋಡು ಭಾಗದಲ್ಲಿ ಸಾಕಷ್ಟು ಹಾನಿ ಉಂಟಾಗಿದೆ.ಕೃಷಿ ಭೂಮಿಗಳು ನೀರಿನಲ್ಲಿ ಮುಳುಗಿದೆ.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನಿಂದ ಸಂಭ್ರಮದ ದಸರಾ ಆಚರಣೆ

ಕುಂದಾಪುರ:ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ,ಸುಜ್ಞಾನ ಪದವಿ ಪೂರ್ವ ಕಾಲೇಜು,ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ-ಮತ್ಯಾಡಿ, ಇಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಕರಾವಳಿ ಕರ್ನಾಟಕದಾದ್ಯಂತ ನವರಾತ್ರಿಯ ಉತ್ಸವವು ವಿಜ್ರಂಬಿಸುತ್ತಿದೆ ಮತ್ತು ಹುಲಿ ವೇಷ ಅಥವಾ ಹುಲಿ ನೃತ್ಯವು ಜನಮನ ಸೆಳೆಯುವ ಒಂದು ಸಾಂಸ್ಕೃತಿಕ ದೃಶ್ಯವಾಗಿದೆ. ಹುಲಿ ವೇಷ ಸಂಪ್ರದಾಯವು ಭಕ್ತಿಯಲ್ಲಿ ಆಳವಾಗಿ ಬೇರೂರಿದೆ.ಇದು ಪ್ರತಿಜ್ಞೆಯನ್ನು ಪೂರೈಸಲು ಅಥವಾ ದೈವಿಕ ರಕ್ಷಣೆಗಾಗಿ ದೇವಿಗೆ ಅರ್ಪಣೆಗಾಗಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಚೀನ ಸಂಪ್ರದಾಯವು ತುಳುನಾಡು ಪ್ರದೇಶದಲ್ಲಿ ಸಾಂಸ್ಕೃತಿಕ ಹೆಮ್ಮೆಯ […]

ಬಿ.ಎಚ್.ಪಿ ಮೀನುಗಾರಿಕಾ ಬೋಟ್ ಶುಭಾರಂಭ

ಕುಂದಾಪುರ:ಮೀನುಗಾರಿಕಾ ವೃತ್ತಿಯಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ಮತ್ಸೋದ್ಯಮಿಗಳಾದ ಉಪ್ಪುಂದ ನಾಗರಾಜ ಖಾರ್ವಿ ಮತ್ತು ಸುಬ್ರಹ್ಮಣ್ಯ ಖಾರ್ವಿ ಮಾಲೀಕತ್ವದ ಬಿ.ಎಚ್.ಪಿ ನೂತನ ಬೋಟ್‍ನ ಶುಭಾರಂಭ ಮತ್ತು ಬಲೆ ಮೂಹುರ್ತ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಂಗೊಳ್ಳಿ ಬಂದರಿನಲ್ಲಿ ಭಾನುವಾರ ನಡೆಯಿತು.ಬಿ.ಎಚ್.ಪಿ ಬೋಟ್‍ನ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ಹುಲಿ ವೇಷ ಕುಣಿತ ಸೇವೆಯನ್ನು ಮಾಡಲಾಯಿತು.ಐವತ್ತಕ್ಕೂ ಅಧಿಕ ಹುಲಿವೇಷ ದಾರಿಗಳು ಬೋಟ್‍ನಲ್ಲಿ ನೃತ್ಯ ಮಾಡುವುದರ ಮುಖೇನ ಸೇವೆಯನ್ನು ನೀಡಿದರು.ಗಂಗೊಳ್ಳಿ ಭಾಗದ ಸಮುದದಲ್ಲಿ ನೂತನ ಬೋಟ್‍ನ್ನು ಚಲಾಯಿಸುವುದರ ಮುಖೇನ ಬೋಟ್ ಚಾಲನೆಯನ್ನು […]

You cannot copy content of this page