ಗಗನ್ ಗಣಪತಿ ಭಟ್‍ಗೆ ಪ್ರಥಮ ಸ್ಥಾನ

ಮುಳ್ಳಿಕಟ್ಟೆ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಶನ್‍ನಲ್ಲಿ ಭಾಗವಹಿಸಿದ ತ್ರಾಸಿ ಡಾನ್ ಬಾಸ್ಕೊ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿ,ಕೆಸಿಡಿಸಿ ಅಧಿಕಾರಿ ಗಣಪತಿ ಎಸ್ ಭಟ್ ಮತ್ತು ಶಿಕ್ಷಕಿ ಗಂಗಾ ಗಣಪತಿ ಭಟ್ ಅವರ ಪುತ್ರ ಗಗನ್ ಗಣಪತಿ ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ.ಶಿಕ್ಷಕರಾದ ಪ್ರಸನ್ನ ಕೆ.ಬಿ ಮತ್ತು ಮಹಾಲಕ್ಷ್ಮೀ,ದೀಪಾ ಮರವಂತೆ ತರಬೇತಿ ನೀಡಿದ್ದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು […]

ಆಯುಷ್ ಖಾರ್ವಿಗೆ ದ್ವಿತೀಯ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಶನ್‍ನಲ್ಲಿ ಭಾಗವಹಿಸಿದ ಸರಕಾರಿ ಕಿರಿಯ ಪ್ರಾಥಮಿಕ ಗಂಗೊಳ್ಳಿ ರಥ ಬೀದಿ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿ,ಗಂಗೊಳ್ಳಿ ದಾಕುಹಿತ್ಲು ಗಣಪತಿ ಮತ್ತು ಲತಾ ದಂಪತಿ ಪುತ್ರ ಆಯುಷ್ ಜಿ ಖಾರ್ವಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಪ್ರಸನ್ನ ಕೆ.ಬಿ ಮತ್ತು ಸುನಿತಾ ಅವರು ತರಬೇತಿ ನೀಡಿದ್ದರು.

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು ಕಿಶೋರಿಯರಲ್ಲಿ ರಕ್ತಹೀನತೆ ಕಂಡು ಬಂದಿರುವುದು ಮಾತ್ರವಲ್ಲದೆ,ಶೇ.30 ರಷ್ಟು ಗಂಡು ಮಕ್ಕಳಲ್ಲಿಯೂ ಕೂಡ ರಕ್ತಹೀನತೆ ಇದೆ ಎಂದು ವರದಿಯಾಗಿರುವುದು ಆತಂಕಕಾರಿ ವಿಷಯವಾಗಿದೆ.ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಾಗಿರುವುದರಿಂದ ಆಂದೋಲನದ ರೀತಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಭಾಗ್ಯಲಕ್ಷ್ಮೀ ಹೇಳಿದರು. ಹೊಸಾಡು ಗ್ರಾಮ […]

You cannot copy content of this page