ನಾಡಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕುಂದಾಪುರ:ಸರಕಾರಿ ಮತ್ತು ಖಾಸಗಿ ಬಸ್ಗಳಿಗೆ ಪರ್ಮಿಟ್ ಇದ್ದರೂ ಬಹಳಷ್ಟು ಕಡೆ ಸಂಚಾರ ಮಾಡುತ್ತಿಲ್ಲ ಕಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡು ಟ್ರಿಪ್ಗಳನ್ನು ಓಡಿಸುತ್ತಾ ಇದ್ದಾರೆ.ಸಾರಿಗೆ ಜನರ ಮೂಲಭೂತ ವ್ಯವಸ್ಥೆಗಳಲ್ಲಿ ಪ್ರಧಾನವಾದದ್ದು ಸರಿಯಾದ ದರದಲ್ಲಿ ಮತ್ತು ಸರಿಯಾದ ಸಮಯಕ್ಕೆ ದೊರೆಯದೆ ಹೊದರೆ ಹಲವಾರು ರೀತಿಯ ಸಮಸ್ಯೆಗಳಿಗೆ ಜನರು ಒಳಗಾಗುತ್ತಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನಿರಾಜ್ ಕಾಟಿಪಳ್ಳ ಹೇಳಿದರು.ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾಮ ಪಂಚಾಯತ್ ಎದುರುಗಡೆ ಬುಧವಾರ ಹಮ್ಮಿಕೊಂಡಿದ್ದ […]





















































































































































































































































































































































































































































































































































































































































































































































































































































































































































































































































































































































































































































































































































































































































































