ಬಸ್‌ನಲ್ಲಿ ಸೀಟ್‌ ಇಲ್ಲ ಎಂದು ಡ್ರೈವರ್‌ ಸೀಟ್‌ ಹತ್ತಿದ ಮಹಿಳೆ

ಚಿಕ್ಕಮಗಳೂರು: ಬಸ್‌ ನಲ್ಲಿ ಸೀಟ್‌ ಇಲ್ಲದ ಕಾರಣ ಮಹಿಳೆಯೊಬ್ಬರು ಡ್ರೈವರ್ ಸೀಟಲ್ಲಿ ಬಸ್ ಹತ್ತಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಶೃಂಗೇರಿಗೆ ಜನ ಸಾಗರ ಹರಿದು ಬತ್ತಿತ್ತು. ಬಸ್ ಬಂದ ಕೂಡಲೇ ಬಸ್ಸಿಗೆ ಮಹಿಳೆಯರು ಮುತ್ತಿಕೊಳ್ಳುತ್ತಿದ್ದಾರೆ. ಬಸ್ಸಿಗೆ ಹತ್ತಲು ಕಷ್ಟವಾದ ಕಾರಣ ಮಹಿಳೆ ಮಕ್ಕಳನ್ನು ಡ್ರೈವರ್ ಸೀಟಲ್ಲಿ ಹತ್ತಿಸಿ, ತಾನೂ ಅಲ್ಲೇ ಬಸ್ ಏರಿದ್ದಾರೆ. ರಾಜ್ಯ ಸರ್ಕಾರದ ಉಚಿತ ಪ್ರಯಾಣದ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ […]

ವಿದ್ಯಾರ್ಥಿಗಳಿಗೆ ಶಬ್ಧಕೋಶ ಪುಸ್ತಕ ವಿತರಣೆ

ಕುಂದಾಪುರ:ನಿವೃತ್ತ ಶಿಕ್ಷಕರಾದ ಸಂಪತ್‍ಕುಮಾರ್ ಪಾಂಗಾಳ ಅವರು ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯ ವಿದ್ಯಾಥಿಗಳಿಗೆ ಶಬ್ಧಕೋಶ ಪುಸ್ತಕವ್ನನು ಉಚಿತವಾಗಿ ವಿತರಿಸಿದರು.ತಾಲೂಕು ದೈಹಿಕ ಶಿಕ್ಷಣ ಪರೀವಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ,ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು.ಸಹಶಿಕ್ಷಕಿ ಭಾಗೀರಥಿ ನಿರೂಪಿಸಿದರು. ಸಹಶಿಕ್ಷಕಿ ವತ್ಸಲಾ ವಂದಿಸಿದರು.

You cannot copy content of this page