ಚಂಡಮಾರುತದ ಅಬ್ಬರಕ್ಕೆ ದಕ್ಷಿಣ ಬ್ರೆಜಿಲ್ ನಲ್ಲಿ 8 ಮಂದಿಸಾವು

ಕುಂದಾಪುರ:ದಕ್ಷಿಣ ಬ್ರೆಜಿಲ್ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಉಷ್ಣವಲಯದ ಚಂಡಮಾರುತದಿಂದ ಸತ್ತವರ ಸಂಖ್ಯೆ ಎಂಟಕ್ಕೆ ಏರಿದ್ದು, 19 ಜನರು ನಾಪತ್ತೆಯಾಗಿದ್ದಾರೆ.40 ಪುರಸಭೆಗಳ ವ್ಯಾಪ್ತಿಯಲ್ಲಿ ಭೂಕುಸಿತ,ಪ್ರವಾಹ ಮತ್ತು ವಿದ್ಯುತ್ ಉಂಟಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.ಒಟ್ಟು 2,330 ಜನರನ್ನು ಸ್ಥಳಾಂತರಿಸಲಾಗಿದೆ.

ಬಿಸಿಲಿನ ತಾಪಕ್ಕೆಬಿಹಾರದಲ್ಲಿ 27 ಮಂದಿ ಸಾವು

ಕುಂದಾಪುರ:ಬಿಹಾರದಲ್ಲಿ ಬಿಸಿಲಿನ ತೀವ್ರತೆಯಿಂದ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಭೋಜ್‌ಪುರ ಜಿಲ್ಲೆಯಲ್ಲಿ ಆರು ಮಂದಿ, ರೋಹ್ತಾಸ್,ಬಂಕಾ ಮತ್ತು ಅರ್ವಾಲ್‌ನಲ್ಲಿ ತಲಾ ನಾಲ್ವರು,ಔರಂಗಾಬಾದ್‌ನಲ್ಲಿ ಮೂವರು ಮತ್ತು ನಲಂದಾ, ಜಮುಯಿ, ಜಹಾನಾಬಾದ್, ಭಾಗಲ್ಪುರ, ಗಯಾ ಮತ್ತು ಪಾಟ್ನಾದಲ್ಲಿ ತಲಾ ಒಬ್ಬರು ಬಿಸಿಗಾಳಿಗೆ ಸಾವನ್ನಪ್ಪಿದ್ದಾರೆ. ಶನಿವಾರ ಪಾಟ್ನಾದಲ್ಲಿ ಗರಿಷ್ಠ ತಾಪಮಾನ 44.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶೇಖ್‌ಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ 45.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.ಮುಂದಿನ 24 ಗಂಟೆಗಳ ಕಾಲ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ […]

ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಆಪದ್ಬಾಂಧವರಾಗಿದ್ದಾರೆ.

ಸುಮಾರು 40 ಅಡಿ ಆಳದ ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಆಪದ್ಬಾಂಧವರಾಗಿದ್ದಾರೆ. ಭಾನುವಾರದಂದು ಉಡುಪಿಯ ಮುಚ್ಚಲಕೋಡು ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಚೆನ್ನೈ ಮೊಕ್ಕಾಂನಲ್ಲಿದ್ದ ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಬೆಕ್ಕಿನ ಮರಿ ಬಾವಿಗೆ ಬಿದ್ದ ವಿಷಯ ತಿಳಿದು ಬಂದಿದೆ. ಕೂಡಲೇ ಹಗ್ಗಕ್ಕೆ ಬಕೆಟ್ ಕಟ್ಟಿ ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಆಗ ಸ್ವತಃ ಪೇಜಾವರ ಶ್ರೀ ಗಳೇ ಹಗ್ಗದ ಸಹಾಯದಿಂದ […]

You cannot copy content of this page