ಬೈಂದೂರು:ಕೆಂಪು ಕಲ್ಲು,ಮರಳು ನೀಡುವಂತೆ ಆಗ್ರಹ,ರಾಜಕೀಯ ತಿರುವು ಪಡೆದ ಬೃಹತ್ ಪ್ರತಿಭಟನೆ

ಕುಂದಾಪುರ:ಕಳೆದ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಪೂರೈಕೆ ಸಮಸ್ಯೆಯಿಂದಾಗಿ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಇದನ್ನು ವಿರೋಧಿಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ,ಕಲ್ಲುಕೋರೆ ಮಾಲೀಕರ ಸಂಘ ಹಾಗೂ ಲಾರಿ ಮಾಲೀಕರ ಸಂಘ ಬೈಂದೂರು ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಜಿಲ್ಲಾಡಳಿತ ಹಾಗೂ ಗಣಿ ಇಲಾಖೆಯ ಅವೈಜ್ಞಾನಿಕ ನಿಯಮಗಳಿಂದಾಗಿ ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ಬಾರಿ ಮೌಖಿಕ ಮನವಿ,‌ ಲಿಖಿತ ಮನವಿ ಸಲ್ಲಿಸಿದರೂ […]

ಕೋಡಿ ಬೀಚ್ ನಲ್ಲಿ ಸಹೋದರಿಬ್ಬರು ನೀರಿನಲ್ಲಿ ಮುಳುಗಿ ಸಾವು,ಒಬ್ಬನ ರಕ್ಷಣೆ

ಕುಂದಾಪುರ:ಕೋಡಿ ಬೀಚ್‍ನಲ್ಲಿ ಈಜಲು ತೆರಳಿದ್ದ ಸಿದ್ದಾಪುರ ಸಮೀಪದ ಅಂಪಾರು ಮೂಡುಬಗೆ ನಿವಾಸಿಯಾಗಿರುವ ಧನರಾಜ್ (23) ವರ್ಷ,ದರ್ಶನ್ (18) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಧನುಷ್ (20) ಪ್ರಾಣಾಪಾಯದಿಂದ ಪಾರಾಗಿದ್ದು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಕ್ಷಣೆಗೆ ಒಳಪಟ್ಟ ಯುವಕ ಸಹಿತ,ಮೃತಪಟ್ಟ ಯುವಕರಿಬ್ಬರು ಒಂದೇ ತಾಯಿಯ ಮಕ್ಕಳಾಗಿದ್ದಾರೆ,ಕಂಪನಿಯಲ್ಲಿ ಉದ್ಯೋಗದಲ್ಲಿರುವ ಇವರು ಮಧ್ಯಾಹ್ನ ಸಮಯದಲ್ಲಿ ಕೋಡಿ ಬೀಚ್ಗೆ ತೆರಳಿದ್ದಾರೆ ಎನ್ನಲಾಗಿದೆ.ಶನಿವಾರ ಸಂಜೆ ಕುಟುಂಬ ಸಮೇತರಾಗಿ ಕೋಡಿ ಬೀಚ್ ಗೆ ಬಂದಿದ್ದು ಇವರು ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಸಂದರ್ಭ ಕಡಲ ಅಲೆಗೆ ಈ ಮೂವರು ಸಹೋದರರು […]

ಕನಕಾಂಗಿ ಶೆಟ್ಟಿ ಕುದ್ರುಕೋಡು

ಕುಂದಾಪುರ:ಹೋಟೆಲ್ ಜುವೇಲ್ ಪಾರ್ಕ್ ಹೆಮ್ಮಾಡಿ (ಕನಕ ಗ್ರೂಪ್) ಉದ್ಯಮಿ ಜಗದೀಶ್ ಶೆಟ್ಟಿ ಕುದ್ರುಕೋಡು ಅವರ ತಾಯಿ ನಾವುಂದ ಗ್ರಾಮದ ಕುದ್ರುಕೋಡು ನಿವಾಸಿ ದೊಡ್ಡಮ್ಮನೆ ಕನಕಾಂಗಿ ಶೆಟ್ಟಿ ಕುದ್ರುಕೋಡು (97) ಅವರು ತಮ್ಮ ಸ್ವಗ್ರಹದಲ್ಲಿ ಬುಧವಾರ ನಿಧರಾದರು.ಅವರಿಗೆ ಏಳು ಗಂಡು,ಓರ್ವ ಹೆಣ್ಣು ಮಗಳು ಇದ್ದಾರೆ.ಹಿರಿಯ ಕೃಷಿ ಮಹಿಳೆಯಾಗಿದ್ದ ಕನಕಾಂಗಿ ಶೆಟ್ಟಿ ಅವರು ತಮ್ಮ ಇಳಿ ವಯಸ್ಸಿನಲ್ಲಿವೂ ಸಕ್ರಿಯವಾಗಿ ಕೃಷಿ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದರು.

You cannot copy content of this page