ಕಾಂಗ್ರೆಸ್ ಪಕ್ಷ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿದೆ-ಸಂಸದ ರಾಘವೇಂದ್ರ

ಕುಂದಾಪುರ:ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ 9 ವರ್ಷ ಪೂರೈಸಿದೆ.ಪ್ರಧಾನಿ ಹಾಗೂ ಹಿಂದಿನ ನಮ್ಮ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ.ಕಾಂಗ್ರೆಸ್ಸಿನ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿರಬಹುದು.ಗ್ಯಾರಂಟಿಗಳನ್ನು ಜಾರಿಗೆ ತರಲು ನಾವು ಹಕ್ಕೊತ್ತಾಯ ಮಾಡುತ್ತೇವೆ.ಖಾಸಗಿ ಬಸ್‍ಗಳಿಗೂ ಸಬ್ಸಿಡಿ ನೀಡುವ ಮೂಲಕ ಅದರಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು.ಇದಕ್ಕಾಗಿ ರಾಜ್ಯವ್ಯಾಪಿ ಬಿಜೆಪಿಯಿಂದ ಜನಾಂದೋಲನ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಹೆಮ್ಮಾಡಿಯ ಜಯಶ್ರೀ ಹಾಲ್‍ನಲ್ಲಿ ಶುಕ್ರವಾರ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತರ […]

ರಾಜಗೋಪುರ ಪುನರ್ ನವೀಕರಣ,ಕಲಶ ಪ್ರತಿಷ್ಠೆ

ಕುಂದಾಪುರ:ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ರಾಜಗೋಪುರ ಪುನರ್ ನವೀಕರಣ ಮತ್ತು ಕಲಶ ಪ್ರತಿಷ್ಠೆ ಕಾರ್ಯಕ್ರಮ ಕೆಪಿ ಕುಮಾರ ಗುರು ತಂತ್ರಿಗಳು ಮತ್ತು ದೇವಳದ ಅರ್ಚಕರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ಶುಕ್ರವಾರ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ,ಮಹಿಳಾ ಮಂಡಳಿ ಸದಸ್ಯರು,ದೇವಸ್ಥಾನದ ದೈವ ಪಾತ್ರಿಗಳು ಉಪಸ್ಥಿತರಿದ್ದರು.

ಶಕ್ತಿ ಯೋಜನೆ ಲಾಭ ಖಾಸಗಿ ಬಸ್ ಗಳಲ್ಲಿಯೂ ಸಿಗುವಂತೆ ಆಗಬೇಕು -ಸಂಸದ ಬಿ.ವೈ ರಾಘವೇಂದ್ರ

ಕುಂದಾಪುರ:ಶಕ್ತಿ ಯೋಜನೆ ಪ್ರಯೋಜನ ಖಾಸಗಿ ಬಸ್‍ಗಳಲ್ಲಿಯೂ ಜನರಿಗೆ ಸಿಗುವಂತಾಗಬೇಕು.ಇದಲ್ಲದೆ ಕೆಎಸ್‍ಆರ್‍ಟಿಸಿ ಬಸ್‍ಗಳು ತುಂಬಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು,ಅದಕ್ಕೆ ಪರ್ಯಾಯ ವ್ಯವಸ್ಥೆ ಏನಾದರೂ ಮಾಡಲು ಸಾಧ್ಯವೇ ಎನ್ನುದನ್ನು ಸರಕಾರ ಚಿಂತಿಸಬೇಕು.ಒಳ್ಳೆಯ ಯೋಜನೆಗಳನ್ನು ಪೂರ್ವ ತಯಾರಿ ನಡೆಸಿ, ಅನುಷ್ಠಾನಗೊಳಿಸಬೇಕು ಈ ಬಗ್ಗೆ ಗಂಭೀರ ಚಿಂತನೆಯನ್ನು ರಾಜ್ಯ ಸರಕಾರ ಮಾಡಬೇಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಶಿಕ್ಷಕರ ವರ್ಗಾವಣೆಯಿಂದ ಕೆಲ ಶಾಲೆಗಳಲ್ಲಿ ಸಮಸ್ಯೆಗಳಾಗುತ್ತಿದೆ, ಪರ್ಯಾಯ ವ್ಯವಸ್ಥೆ ಮಾಡದೇ ಶಿಕ್ಷಕರ […]

You cannot copy content of this page