ಸಾಮೂಹಿಕ ಸತ್ಯನಾರಾಯಣ ಪೂಜೆ

ಕುಂದಾಪುರ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಲೂರುನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ,ಆಲೂರು ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಗಾಣಿಗ,ಉಪಾಧ್ಯಕ್ಷ ರವಿ ಶೆಟ್ಟಿ,ಪ್ರೇಮಾನಂದ ಶೆಟ್ಟಿ ಕಟ್ಟಕೇರಿ,ಪಂಚಾಯತ್ ಸದಸ್ಯರಾದ ರಾಜ ಎನ್ ದೇವಾಡಿಗ,ಸುಬ್ಬಣ್ಣ ಶೆಟ್ಟಿ,ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ತಲೆ ದಂಡ ನಿಶ್ಚಿತ-ಸಮರ್ಥ ನಾಯಕನಿಗಾಗಿ ತಲಾಶ್

ಬೆಂಗಳೂರು :ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮುಖಭಂಗಕ್ಕೀಡಾಗಿರುವ ಬಿಜೆಪಿ ಈಗ ಲೋಕಸಭೆ ಚುನಾವಣೆಗಾಗುವಾಗ ಪಕ್ಷದ ವರ್ಚಸ್ಸನ್ನು ಮೇಲೆತ್ತಬಲ್ಲ ರಾಜ್ಯಾಧ್ಯಕ್ಷನನ್ನು ಹುಡುಕುತ್ತಿದೆ. ಜುಲೈ 3ರಂದು ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು,ಅದಕ್ಕೂ ಮೊದಲು ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಯಲ್ಲಿ ಪ್ರಕ್ರಿಯೆ ಶುರುವಾಗಿದೆ. ಸದ್ಯಕ್ಕೆ ರಾಜ್ಯಾಧ್ಯಕ್ಷರಾಗಿರುವ ನಳಿನ್‌ಕುಮಾರ್ ಕಟೀಲು ಅವರ ಅವಧಿ ಮುಗಿದಿದ್ದು ಮತ್ತೆ ಅವರನ್ನೇ ಮುಂದುವರಿಸುವ ಉದ್ದೇಶ ಬಿಜೆಪಿ ಹೈಕಮಾಂಡ್‌ಗೆ ಇಲ್ಲ. ಸ್ವತಹ ನಳಿನ್‌ಕುಮಾರ್‌ ಕಟೀಲು ಜವಾಬ್ದಾರಿಯಿಂದ ಕಳಚಿಕೊಳ್ಳಲು ರೆಡಿಯಾಗಿದ್ದಾರೆ.ಅರುವತ್ತೈದು ಸ್ಥಾನಕ್ಕೆ ಕುಸಿದಿರುವ ಬಿಜೆಪಿ ಚುನಾವಣೆ […]

ಪುಸ್ತಕ,ಕ್ರೀಡಾ ಸಾಮಾಗ್ರಿ ವಿತರಣೆ

ಕುಂದಾಪುರ:ಬೈಂದೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕಡಿಕೆ-ನಾಡ ಶಾಲೆಯಲ್ಲಿ ಪುಸ್ತಕ ಮತ್ತು ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ನಾಗೇಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ನಾಡ ಗ್ರಾ.ಪಂ ಅಧ್ಯಕ್ಷ ದಿನೇಶ್ ಶೆಟ್ಟಿ,ಉಪಾಧ್ಯಕ್ಷೆ ಪದ್ದು ಪೂಜಾರಿ,ಸದಸ್ಯ ಪ್ರತ್ವಿಷ್ ಶೆಟ್ಟಿ,ಚಂದ್ರಶೇಖರ್ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಮೆಂಡನ್,ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಶೆಟ್ಟಿ,ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.ಕಡಿಕೆ ಆಮನೆ ದಿ.ರಾಮಣ್ಣ ಶೆಟ್ಟಿ ಸ್ಮರಣಾರ್ಥವಾಗಿ ಪ್ರಸಾದ್ ಶೆಟ್ಟಿ ಅವರು 35,000.ರೂ ಮೌಲ್ಯದ ಪುಸ್ತಕವನ್ನು ಕೊಡುಗೆ ಆಗಿ ನೀಡಿದರು.ಯುವ ಸಬಲೀಕರಣ ಹಾಗೂ […]

You cannot copy content of this page