90 ಬಿಡಿ ಮನೀಗ್ ನಡಿ ಚಿತ್ರ ಬಿಡುಗಡೆ

ಬೆಂಗಳೂರು:ಅಮ್ಮ ಟಾಕೀಸ್ ಬಾಗಲಕೋಟೆ ರತ್ನಮಾಲಾ ಬಾದರದಿನ್ನಿ ಚಿತ್ರ ತಂಡದವರು ನಿರ್ಮಿಸುತ್ತಿರುವ,ಕುಂದಾಪುರ ಮೂಲದ ಪತ್ರಕರ್ತ ನಾಗರಾಜ್ ಅರೆಹೊಳೆ ನಿರ್ದೇಶನದ ಹಾಸ್ಯ ನಟ ಬಿರಾದಾರ್ ಅಭಿನಯಿಸಿರುವ 90 ಬಿಡಿ ಮನೀಗ್ ನಡಿ ಚಿತ್ರ ಜೂ.29 ರ ಗುರುವಾರದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಕೆಸರಿನಲೊಂದು ದಿನ ಆಟ

ಕುಂದಾಪುರ:ಟೀಮ್ ತ್ರಾಸಿ ವತಿಯಿಂದ ಕೆಸರಿನಲೊಂದು ದಿನ ಸಾಂಪ್ರದಾಯಿಕ ಕ್ರೀಡೆಗಳ ಹಬ್ಬ ಇಪ್ಪಿಬೈಲ್ ಬೊಬ್ಬರ್ಯ ದೇವಸ್ಥಾನದ ಎದುರು ತ್ರಾಸಿಯಲ್ಲಿ ಭಾನುವಾರ ನಡೆಯಿತು.ಪುರುಷರಿಗೆ ಕೆಸರಿನಲ್ಲಿ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ,ಮಹಿಳೆಯರಿಗೆ ಕೆಸರಿನಲ್ಲಿ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ,ಮಕ್ಕಳಿಗೆ ವೈವಿಧ್ಯಮಯವಾದ ಕ್ರೀಡೆಗಳು,ಮಧ್ಯಾಹ್ನ ಕರಾವಳಿ ಸಾಂಪ್ರದಾಯಿಕ ಮಳೆಗಾಲದ ಮಾದರಿ ವಿಶೇಷ ಊಟ,ಸಂಗೀತ ಕಾರ್ಯಕ್ರಮ ಜರುಗಿತು.

ಆಲೂರಿಗೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ

ಕುಂದಾಪುರ:ಆಲೂರು ಮಾರ್ಗಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘ ಆಲೂರು ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ಆಲೂರು ಹಾಗೂ ಸ್ಥಳೀಯರ ವತಿಯಿಂದ ಆಲೂರು ಗ್ರಾಮ ಪಂಚಾಯತ್ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ ಕಾಂಡಚಿನ ಪ್ರದೇಶವಾದ ಆಲೂರು ಭಾಗದ ಕೂಲಿ ಕಾರ್ಮಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು […]

You cannot copy content of this page