ಡಿಸೆಂಬರ್.14 ರಂದು ಬಡಾಕೆರೆ ಶಾಲೆ ಸ್ನೇಹ ಸಮ್ಮಿಲನ,ಶಾಲಾ ವಾರ್ಷಿಕೋತ್ಸವ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ) ಬಡಾಕೆರೆಯಲ್ಲಿ ಡಿಸೆಂಬರ್ 14.ರಂದು ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.ಸ್ನೇಹ ಸಮ್ಮಿಲನ ಹಾಗೂ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಬೆಳಿಗ್ಗೆ 11 ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ನೃತ್ಯ ತಂಡದಿಂದ ನೃತ್ಯ ವೈಭವ,12.30 ರಿಂದ 1.30 ರ ತನಕ ಗುರು ವಂದನಾ ಕಾರ್ಯಕ್ರಮ,2.30 ರಿಂದ ವಿವಿಧ ಶಾಲಾ ಮಕ್ಕಳಿಂದ ನಾಟ್ಯ ವೈಭವ,ನೃತ್ಯ ಸ್ಪರ್ಧಾ ಕಾರ್ಯಕ್ರಮ.4.30 ರಿಂದ 5.30 ರ ತನಕ ಶಾಲಾ ಶಿಕ್ಷಕಿಯರು ಹಾಗೂ ಹಳೆ […]

ಧನ್ವಿ ಪೂಜಾರಿ ಮರವಂತೆಗೆ ಚಿನ್ನದ ಪದಕ

ಕುಂದಾಪುರ:ವರ್ಷಿಣಿ ಯೋಗ ಎಜ್ಯುಕೇಶನ್ ಆಂಡ್ ಕಲ್ಚರಲ್ ಸ್ಪೋಟ್ರ್ಸ್ ಟ್ರಸ್ಟ್ ಶಿವಮೊಗ್ಗ ವತಿಯಿಂದ ಥಾಯ್ಲೆಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಮ್ಮಾಡಿ ಜನತಾ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಧನ್ವಿ ಪೂಜಾರಿ ಮರವಂತೆ ಭಾರತ ದಿಂದ ಪ್ರತಿನಿಧಿಸಿ ಚಿನ್ನದ ಪದಕ ಗಳಿಸಿದ್ದಾರೆ.ವಿದ್ಯಾರ್ಥಿ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಿನ್ಸಿಪಾಲ್,ಬೋಧಕ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಿಧನ

ಬೆಂಗಳೂರು:ಕೇಂದ್ರ ಮಾಜಿ ವಿದೇಶಾಂಗ ಸಚಿವ,ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಂಗಳವಾರ ನಿಧನರಾಗಿದ್ದಾರೆ.ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್ ಎಂ ಕೃಷ್ಣ ರವರು ದಿನಾಂಕ: 10.12.2024ರ ಮಂಗಳವಾರದಂದು ಪೂರ್ವಾಹ್ನ 02:30ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ. ದಿವಂಗತರ ಅಂತ್ಯಕ್ರಿಯೆಯನ್ನು ದಿನಾಂಕ: 11.12.2024ರಂದು ಬುಧವಾರ ಹುಟ್ಟುರಾದ ಮಂಡ್ಯ ಜಿಲ್ಲೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರೆವೇರಿಸಲಾಗುವುದು ಮತ್ತು ದಿನಾಂಕ:10.12.2024 ರಿಂದ 12.12.2024 ರವರೆಗೆ (ಉಭಯ […]

You cannot copy content of this page