ಆರಾಧ್ಯ ಆರ್‍ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ದೆಯಲ್ಲಿ ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಆರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಶಿಕ್ಷಕಿ ಯಶೋದ ದಂಪತಿ ಪುತ್ರಿ.ಶಿಕ್ಷಕ ಪ್ರಸನ್ನ ಕೆ,ಮಹಾಲಕ್ಷ್ಮೀ ಮತ್ತು ಸುನೀತ ತರಬೇತಿ ನೀಡಿದ್ದರು.

ವಿನಿಶ್ ಕುಮಾರ್‍ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್‍ನ ವಿನಿಶ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಕಾವ್ರಾಡಿ ವಿಜಯ್ ಕುಮಾರ್ ಮತ್ತು ಶಿಕ್ಷಕಿ ಅನುಷಾ ಸಿ.ಬಂಗೇರ ಗಂಗೊಳ್ಳಿ ದಂಪತಿ ಪುತ್ರ. ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 5ನೇ ತರಗತಿ ವಿದ್ಯಾರ್ಥಿ.ಶಿಕ್ಷಕರಾದ ಪ್ರಸನ್ನ ಕೆ ಮತ್ತು ಸುನೀತ ತರಬೇತಿ ನೀಡಿದ್ದರು.

ಸುದೇಶ್ ಕುಮಾರ್ ಶೆಟ್ಟಿ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ತೇರ್ಗಡೆ

ಕುಂದಾಪುರ:ಸುದೇಶ್ ಕುಮಾರ್ ಶೆಟ್ಟಿ ಅವರು 2024-25ನೇ ಸಾಲಿನ ಐಸಿಎಐ (ಸಿಎ) ಲೆಕ್ಕಪರಿಶೋಧಕರ ಅಂತಿಮ ಹಂತದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೆ ತೇರ್ಗಡೆ ಹೊಂದಿದ್ದಾರೆ.ಅವರು ದಿ.ಸಂತೋಷ್ ಶಕೀಲಾ ಶೆಟ್ಟಿ ನಾರ್ಕಳಿ ಗುಡಿಮನೆ ದಂಪತಿಗಳ ಪುತ್ರ.

You cannot copy content of this page