ಮಳೆ ಆರ್ಭಟಕ್ಕೆ ಒತ್ತಿನೆಣೆ ಗುಡ್ಡ ಕುಸಿತ,ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟದ ಭೀತಿ
ಬೈಂದೂರು:ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ನದಿ,ಹಳ್ಳ,ಕೊಳ್ಳ ತುಂಬಿ ಹರಿಯುತ್ತಿದೆ.ಮಳೆಯ ಆರ್ಭಟಕ್ಕೆ ಬೈಂದೂರು ತಾಲೂಕಿನ ಒತ್ತಿನೆಣೆ ಗುಡ್ಡ ಕುಸಿತಗೊಂಡಿದ್ದು,ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟದ ಭೀತಿ ಎದುರಾಗಿದೆ.ತಾತ್ಕಾಲಿಕ ಕ್ರಮದ ಭಾಗವಾಗಿ ಗುಡ್ಡದ ಮಗ್ಗುಲಲ್ಲಿ ಹಾದು ಹೋಗಿರುವ ಒಂದು ದಿಕ್ಕಿನ ಸಂಚಾರವನ್ನು ಬಂದ್ ಮಾಡಲಾಗಿದೆ.