ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಕುಂದಾಪುರ ಕನ್ನಡ ಸಂಭ್ರಮ
ಕುಂದಾಪುರ:ಜ್ಞಾನ,ಮೌಲ್ಯ,ಶಿಸ್ತು-ಸಂಯಮದಿಂದ ಕೂಡಿದ ಕುಂದಾಪುರ ಕನ್ನಡ ಭಾಷೆಯು ಜನಪದ ಸೊಗಡಿನಿಂದ ಕೂಡಿದೆ ಜನರ ಜೀವನವು ಕುಂದಗನ್ನಡದೊಂದಿಗೆ ಸಮ್ಮಿಲನ ಗೊಂಡಿದೆ.ಅಬ್ಬಿ ಭಾಷೆ ಮಾತಾಡುಕೆ ಚೆಂದ ಅದನ್ನು ಮರೆತ್ರೆ ನಾವು ನಮ್ಮನ್ನ ಮರೆತಂತೆ ಎಂದು ಪ್ರೋ.ಎಂ ಬಾಲಕೃಷ್ಣ ಶೆಟ್ಟಿ ಹೇಳಿದರು.ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಕುಂದಾಪ್ರ ದಿನಾಚರಣೆ ಕಾರ್ಯಕ್ರಮವನ್ನು ತಿರಿಗೆ ಭತ್ತವನ್ನು ತುಂಬುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.ಹಾದಿ ಮೇಲೆ ಹೋಪರ್ ಹಾಡೆಂದು ಕಾಣ್ಬೇಡಿ.. ಹಾಡಲ್ಲ ನನ್ನ ಒಡಲೂರಿ.. ಎ೦ದು ಭಾಷೆಯ ಸೊಗಸನ್ನು ಜನಪಾದ ಹಾಡಿನ […]






















































































































































































































































































































































































































































































































































































































































































































































































































































































































































































































































































































































































































































































































































































































































































