ಹೊಲಿಗೆ ಯಂತ್ರ,ಧನ ಸಹಾಯ ವಿತರಣೆ

ಬೈಂದೂರು:ಜಮೀಯ್ಯತುಲ್ ಫಲಾಹ್ ಬೈಂದೂರು ತಾಲೂಕು ಘಟಕದ ವತಿಯಿಂದ ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮತ್ತು ಮುಸ್ಲಿಂ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು.ಜಮೀಯ್ಯತುಲ್ ಫಲಾಹ್ ಬೈಂದೂರು ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮೌಲನ ಮುಸಾಫ್ ಯೂಸುಫ್ ಜಿ ದುವಾ ನೆರವೇರಿಸಿದರು.ಬೈಂದೂರು ಕ್ಷೇತ್ರದ ಶಿಕ್ಷಣ ಅಧಿಕಾರಿ ಮಂಜುನಾಥ್ ಜಿ. ಉದ್ಘಾಟಿಸಿದರು.ಜನಾಬ್ ಶಬೀ ಅಹ್ಮದ್ ಖಾಝಿ (ಅಧ್ಯಕ್ಷರು ಜಮೀಯ್ಯತುಲ್ ಫಲಾಹ್ ಉಡುಪಿ ಜಿಲ್ಲೆ)‌ ಶುಭಹಾರೈಸಿದರು.ಎಮ್ ಎಮ್ ಜಿಪ್ರಿ ಉದ್ಯಮಿ ಶಿರೂರು […]

ಮನೆ ಮೇಲೆ ಗುಡ್ಡ ಜರಿದು ಮಹಿಳೆಯೊಬ್ಬರ ಸಾವು:ದ.ಕ ಜಿಲ್ಲಾಧಿಕಾರಿ ಭೇಟಿ

ಮಂಗಳೂರು:ಭಾರಿ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಭೂಕುಸಿತದಿಂದ ಗುಡ್ಡ ಜರಿದು ಮನೆ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮನೆ ಮೇಲೆ ಗುಡ್ಡ ಜರಿದು ಹಾನಿ ಸಂಭವಿಸಿದ ಘಟನಾ ಸ್ಥಳಕ್ಕೆ ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವಘಡ ಸಂಭವಿಸಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಐದು ಲಕ್ಷ.ರೂ ಪರಿಹಾರ ಹಾಗೂ ಮನೆ ರಿಪೇರಿಗೆ 1.20 ಲಕ್ಷ.ರೂ ಪರಿಹಾರವನ್ನು ಸರಕಾರದಿಂದ ನೀಡುವ ಭರವಸೆಯನ್ನು ನೀಡಿದರು.ತಾಲೂಕಿನಲ್ಲಿ ಮತ್ತೆ ಇಂತಹ ಘಟನೆಗಳು […]

ನಾವುಂದ-ಸಾಲ್ಬುಡದಲ್ಲಿ ನೆರೆ ಇಳಿತ

ಬೈಂದೂರು:ನೆರೆ ಬಾಧಿತ ಪ್ರದೇಶವಾದ ನಾವುಂದ ಗ್ರಾಮದ ಸಾಲ್ಬುಡದಲ್ಲಿ ಗುರುವಾರ ಕಾಣಿಸಿಕೊಂಡಿದ್ದ ನೆರೆ ಶುಕ್ರವಾರ ಇಳಿಮುಖವಾಗಿದೆ.ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಬಾರಿ ಮಳೆಗೆ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ನಾವುಂದ ಸಾಲ್ಬುಡದಲ್ಲಿ ನೆರೆ ನೀರಿನಿಂದ ಕೃಷಿ ಭೂಮಿಗಳು ಮುಳುಗಿದ್ದವು.

You cannot copy content of this page