ಸತ್ಯದ ಮೇಲೆ ಬೆಳಕನ್ನು ಚೆಲ್ಲುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ-ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ:ಶ್ರಮ,ಧ್ಯೇಯ,ಹಠವಿದ್ದರೆ ಮಾತ್ರ ಬದುಕಿನಲ್ಲಿ ಗೆಲುವನ್ನು ಸಾಧಿಸಬಹುದು.ಸಮಾಜದ ಅಂಕುಡೊಂಕು ತಿದ್ದುವ,ಸತ್ಯದ ಮೇಲೆ ಬೆಳಕನ್ನು ಚೆಲ್ಲುವ ಗುರುತರ ಜವಾಬ್ದಾರಿ ಮಾಧ್ಯಮ,ಪತ್ರಕರ್ತರ ಮೇಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ರಜತ ಮಹೋತ್ಸವ ಸಮಿತಿ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಹಯೋಗದಲ್ಲಿ ಮಣಿಪಾಲ ಕೆಎಂಸಿ ಡಾ.ಟಿಎಂಪೈ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಕರ್ತರಿಗೆ ನಿವೇಶನ […]