ಜುಲೈ.16 ರಂದು ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಕುಂದಾಪುರ:ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜುಲೈ.16 ರಂದು ಭಾನುವಾರ ಜಿ.ಬಿ.ಬಿ ಕಲ್ಯಾಣ ಮಹಲ್ ನಂ.3/1,1ನೇ ಕ್ರಾಸ್,ಎ.ಸಿ.ಆರ್ ಬಡಾವಣೆ, ಸೆಂಟ್ರಲ್ ಲೈಬ್ರರಿ ಹತ್ತಿರ (ವೀರೇಶ್ ಟಾಕೀಸ್ ಹಿಂಭಾ) ವಿಜಯ ನಗರ, ಬೆಂಗಳೂರು.ನಲ್ಲಿ ನಡೆಯಲಿದೆ. ಆಟಿಡೊಂಜಿ ಕಾರ್ಯಕ್ರಮದ ಪ್ರಯುಕ್ತ ಕಿರಿಯರ ವಿಭಾಗದ ಛದ್ಮವೇಷ ಸ್ಪರ್ಧೆ,ಜೊತೆಗೆ ವಿವಿಧ ಕಲಾ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಲ್ಲಿ ಅವಕಾಶವಿದೆ.ನೃತ್ಯ, ಸಂಗೀತ, ಸ್ಕಿಟ್, ಇನ್ನಿತರ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ,ಸಭಾ ಕಾರ್ಯಕ್ರಮ ಜರುಗಲಿದೆ. (ಜುಲೈ.16 […]

ಆಲೂರು ನರ್ಲೆಗುಳಿ ಬಾಲಕೃಷ್ಣ ಶೆಟ್ಟಿ ನಿಧನ

ಕುಂದಾಪುರ:ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಆಲೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಆಲೂರು ನರ್ಲೆಗುಳಿ ಬಾಲಕೃಷ್ಣ ಶೆಟ್ಟಿ (71) ಅವರು ಅನಾರೋಗ್ಯದ ಕಾರಣದಿಂದ ಸೋಮವಾರ ನಿಧನರಾದರು.ಮೂವರು ಸಹೋದರಿಯರು,ಇಬ್ಬರು ಸಹೋದರರು ಹಾಗೂ ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

ವನಮಹೋತ್ಸವ ಕಾರ್ಯಕ್ರಮ ಆಚರಣೆ

ಕುಂದಾಪುರ:ಪರಿಸರ ಮೇಲಿನ ಕಾಳಜಿಯಿಂದ ಪ್ರತಿ ವರ್ಷ ವನಮಹೋತ್ಸವ ಕಾರ್ಯಕ್ರಮದಡಿ ಗಿಡಗಳನ್ನು ನೆಟ್ಟು ಪೆÇೀಷಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸದಸ್ಯರು ನವದೆಹಲಿ ಶಿವನಂದಾ ತಲ್ಲೂರು ಹೇಳಿದರು.ಸ್ಪಂದನ ಯುವ ಸಂಘ ಮಂಕಿ-ಗುಜ್ಜಾಡಿ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸರಕಾರಿ ಹಿರಿಯ ಪ್ರಾಥಮಿಕ ಮಂಕಿ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕವೃಂದವರು,ಸ್ಪಂದನ ಯುವ ಸಂಘದ ಅಧ್ಯಕ್ಷರು,ಗೌರವಾಧ್ಯಕ್ಷರು,ಸದ್ಯರು ಉಪಸ್ಥಿತರಿದ್ದರು.

You cannot copy content of this page