ಸಾಮಥ್ರ್ಯ ಅಭಿವೃದ್ಧಿ ತರವಬೇತಿ ಸಭೆ

ಕುಂದಾಪುರ:ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಕುಂದಾಪುರ ಹಾಗೂ ಸೌಪರ್ಣಿಕಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹೊಸಾಡು ವತಿಯಿಂದ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಾರ್ಯಕಾರಿ ಸಮಿತಿ,ವಾರ್ಡ್ ಮಟ್ಟದ ಹಾಗೂ ಸ್ವಸಹಾಯ ಗುಂಪುಗಳ ಸಾಮಥ್ರ್ಯ ಅಭಿವೃದ್ಧಿ ತರವಬೇತಿ ಸಭೆ ಹೊಸಾಡು ಗ್ರಾ.ಪಂ ನಲ್ಲಿ ಗುರುವಾರ ನಡೆಯಿತು.ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ವಿಜಯ ಗಾಣಿಗ ಅಧ್ಯಕ್ಷತೆ ವಹಿಸಿದ್ದರು,ಹೊಸಾಡು ಗ್ರಾ.ಪಂ ಆಡಳಿತಾಧಿಕಾರಿ ರಘುರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಭಿವೃದ್ಧಿ […]

ಅಪಾಯಕ್ಕೆ ಸಿಲುಕಿದ ಕಡಲಾಮೆ ರಕ್ಷಣೆ,ಅರಣ್ಯಾಧಿಕಾರಿಗಳಿಗೆ ಹಸ್ತಾಂತರ

ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚುಗೋಡು ಕಡಲ ತೀರದಲ್ಲಿ ಒದ್ದಾಡುತ್ತಿದ್ದ ಆಲೀವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯನ್ನು ವಿಪತ್ತು ನಿರ್ವಹಣಾ ಘಟಕ ಮೊವಾಡಿ ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದ ತಂಡದ ಸದಸ್ಯರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಗುರುವಾರ ಹಸ್ತಾಂತರ ಮಾಡಿದ್ದಾರೆ.ಕಡಲಾಮೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಸಚಿನ್ ಖಾರ್ವಿ,ಜೀವ ರಕ್ಷಕ ತಂಡದ ಸದಸ್ಯರಾದ ದಿನೇಶ್ ಖಾರ್ವಿ,ಶರತ್ ಖಾರ್ವಿ ಹಾಗೂ ಸ್ಥಳೀಯರಾದ ಯೋಗೇಶ್,ಕಾರ್ತಿಕ್,ಆದರ್ಶ್,ರಾಘವೇಂದ್ರ ಪಾಲ್ಗೊಂಡಿದ್ದರು.ಇದೆ ತಂಡ ಬುಧವಾರ ಮರವಂತೆ ಬೀಚ್‍ನಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ […]

ಅಕ್ರಮವಾಗಿ ಜಾನುವಾರು ಸಾಗಾಟ, ಓಮ್ನಿ ಸಹಿತ ಆರೋಪಿ ವಶಕ್ಕೆ

ಕುಂದಾಪುರ:ಓಮ್ನಿ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪಿಯನ್ನು ಕುಂದಾಪುರ ಪ್ರೊಬೆಶನರಿ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಕೋಡಿ ರಸ್ತೆಯಲ್ಲಿ ಬುಧವಾರ ನಡೆದಿದೆ.ಮೂಡುಗೋಪಾಡಿ ನಿವಾಸಿ ಮೊಹಮ್ಮದ್ ರಿಯಾಝ್(38) ಬಂಧಿತ ಆರೋಪಿ.ಜು.19 ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣಾ ಪ್ರೊಬೇಶನರಿ ಡಿವೈಎಸ್‌ಪಿ ರವಿ ಅವರಿಗೆ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮಧಸೂದನ್,ರಾಮ ಪೂಜಾರಿ ಕರೆ ಮಾಡಿ ಕೋಡಿ ರಸ್ತೆಯಲ್ಲಿ ನೀಲಿ ಬಣ್ಣದ ಮಾರುತಿ ಓಮಿನಿ ವಾಹನದಲ್ಲಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು, ಕುಂದಾಪುರ […]

You cannot copy content of this page