ಅರಶಿನಗುಂಡಿ ಜಲಪಾತಕ್ಕೆ ಕಾಲು ಜಾರಿ ಬಿದ್ದು ನಾಪತ್ತೆ ಆಗಿದ್ದ ಶರತ್ ಶವವಾಗಿ ಪತ್ತೆ
ಕುಂದಾಪುರ:ಬೈಂದೂರು ತಾಲೂಕಿನ ಕೊಲ್ಲೂರು ಅರಶಿನಗುಂಡಿ ಜಲಪಾತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕಳೆದ ಭಾನುವಾರ ನಾಪತ್ತೆ ಆಗಿದ್ದ ಭದ್ರಾವತಿ ಮೂಲದ ಶರತ್ (23) ಶವವಾಗಿ ಪತ್ತೆ ಆಗಿದ್ದಾನೆ.ರಜಾ ಮಜಾವನ್ನು ಅನುಭವಿಸಲು ಸ್ನೇಹಿತರ ಜತೆಗೂಡಿ ಅರಶಿನಗುಂಡಿ ಜಲಪಾತಕ್ಕೆ ಬಂದಿದ್ದ ಶರತ್ ಜಲಪಾತವನ್ನು ನೋಡುತ್ತಾ ನಿಂತ್ತಿದ್ದ ಸಂದರ್ಭ ಕಾಲು ಜಾರಿ ಜಲಪಾತಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.ಶರತ್ ನೀರಿಗೆ ಬೀಳುತ್ತಿರುವ ವಿಡಿಯೋ ಆತನ ಸ್ನೇಹಿತನ ಮೊಬೈಲ್ ಕ್ಯಾಮಾರಾದಲ್ಲಿ ಸೆರೆ ಆಗಿತ್ತು,ಶರತ್ಗಾಗಿ ಕಳೆದ ಒಂದು ವಾರಗಳಿಂದ ಹುಡುಕಾಟ ನಡೆಸಿದ್ದರು ಸುಳಿವು ಮಾತ್ರ […]



























































































































































































































































































































































































































































































































































































































































































































































































































































































































































































































































































































































































































































































































































































































































































