ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಪ್ರಕರಣ:ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಉಡುಪಿ:ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೆರೆ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಶುಕ್ರವಾರ ಉಡುಪಿಯಲ್ಲಿ ನಡೆಯಿತು.ಬೃಹತ್ ಪ್ರತಿಭಟನೆ ನಡೆಸಿದ ನಂತರ ಸಭೆ ಬಳಿಕ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಮಾತನಾಡಿ ಇವೊಂದು ಪ್ರಕರಣದಲ್ಲಿ ಪಿಎಫ್‍ಐ ನಂಟು ಇದೆ ಎನ್ನುವ ಸಂಶಯ ಬಲವಾಗಿ ಕಾಡುತ್ತಿದ್ದು,ವಿಡಿಯೋ ಚಿತ್ರೀಕರಣ ಮಾಡಿದ ಅನ್ಯಕೋಮಿನ […]

ನಾಪತ್ತೆ ಆದ ಶರತ್ ಗಾಗಿ,ಡ್ರೋನ್ ಕ್ಯಾಮೆರಾದ ಮೂಲಕ ಶೋಧ

ಕುಂದಾಪುರ:ಬೈಂದೂರು ತಾಲೂಕಿನ ಕೊಲ್ಲೂರು ಅರಶಿನಗುಂಡಿ ಎಂಬಲ್ಲಿ ಜಲಪಾತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಭಾನುವಾರ ನಾಪತ್ತೆ ಆದ ಭದ್ರಾವತಿ ಮೂಲದ ನಿವಾಸಿ ಶರತ್‍ಗಾಗಿ ಜಲಪಾತದ ಆಸುಪಾಸಿನ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಬಿಟ್ಟು ಹುಡುಕಾಟವನ್ನು ತೀವೃಗೊಳಿಸಲಾಗಿದೆ.ಕೊಲ್ಲೂರು ಅರಶಿನಗುಂಡಿ ಜಲಪಾತಕ್ಕೆ ಬಿದ್ದು ಕಣ್ಮರೆಯಾಗಿ ಆರು ದಿನಗಳಾದರು ಶರತ್ (22) ಗುರುತು ಇನ್ನೂ ಪತ್ತೆ ಆಗಿಲ್ಲ.ಮಗನ ಬರುವಿಕೆಗಾಗಿ ಹೆತ್ತವರು ಜಾತಕ ಪಕ್ಷಿ ಅಂತೆ ಕಾದು ಕುಳಿತಿದ್ದು,ಶರತ್ ಬದುಕಿದ್ದಾನೆ ಎನ್ನುವುದು ಪೋಷಕರ ನಂಬಿಕೆ ಆಗಿದೆ.ಶರತ್‍ಗಾಗಿ ಇನ್ನಿಲ್ಲದ ಹುಡುಕಾಟವನ್ನು ಮಾಡಿದ್ದ ಪೊಲೀಸ್ ಇಲಾಖೆ ಶುಕ್ರವಾರ […]

ಶಿಕ್ಷಕಿ ಅನ್ನೇಗೆ ಭಾರತೀಯ ಶೈಲಿಯಲ್ಲಿ ಬೀಳ್ಕೊಡುಗೆ

ಕುಂದಾಪುರ:ಎಫ್‍ಎಸ್‍ಎಲ್ ಸಂಸ್ಥೆ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮಾತೃ ದೇಶಕ್ಕೆ ತೆರಳುತ್ತಿರುವ ಜರ್ಮನಿ ಮೂಲದ ನಿವಾಸಿ ಶಿಕ್ಷಕಿ ಅನ್ನೇ ಅವರನ್ನು ಶಾಲೆಯ ಎಸ್‍ಡಿಎಂಸಿ ವತಿಯಿಂದ ಶುಕ್ರವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾರತೀಯ ಶೈಲಿಯಲ್ಲಿ ಮುಡಿ ತುಂಬಿ ವಿಶೇಷವಾದ ರೀತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಎಸ್‍ಡಿಎಂಸಿ ಅಧ್ಯಕ್ಷೆ ರೇಖಾಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಉಪಾಧ್ಯಕ್ಷ ಹುಸೇನಪ್ಪ ಮತ್ತು ಸದಸ್ಯರು,ಎಫ್‍ಎಸ್‍ಎಲ್ ಸಂಸ್ಥೆ ಮಾರ್ಗದರ್ಶಕ ದಿನೇಶ,ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್,ಅಂಗನವಾಡಿ ಶಿಕ್ಷಕಿ ಮುತ್ತು,ಮಕ್ಕಳ ಪೆÇೀಷಕರು,ಶಿಕ್ಷಕವೃಂದವರು […]

You cannot copy content of this page