ಗದ್ದೆಗಿಳಿದು ನಾಟಿ ಮಾಡಿದ ತಾಲೂಕು ಪಂಚಾಯಿತಿ ಇಒ-ಭಾರತಿ ಎನ್

ಕುಂದಾಪುರ:ಜಿಲ್ಲಾ ಪಂಚಾಯತ್ ಉಡುಪಿ ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ಇಲಾಖೆ ಉಡುಪಿ ಜಿಲ್ಲೆ,ತಾಲೂಕು ಪಂಚಾಯತ್ ಬೈಂದೂರು, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ ಅವರ ಸಂಯುಕ್ತ ಆಶ್ರಯದಲ್ಲಿ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿತ್ರಾಡಿ ಯಲ್ಲಿ ಪಾಲಾಕ್ಷ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಡಿಲು ಬಿದ್ದ ಭೂಮಿಯನ್ನು ನಾಟಿ ಮಾಡುವ ಮೂಲಕ ಕೃಷಿ ಭೂಮಿಗೆ ಜೀವ ಕಳೆ ತಂದಿದ್ದಾರೆ.ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್ ಅವರುಕರಾವಳಿ ಸಂಪ್ರದಾಯಕ ಶೈಲಿಯ ಹಾಳೆ ಟೋಪಿ ಧರಿಸಿ ಭತ್ತದ ನೇಜಿಯನ್ನು ವಿತರಿಸುವ ಮೂಲಕ […]

ಶಿಕ್ಷಕ ರಕ್ಷಕ ಸಂಘದ ಮಹಾಸಭೆ

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆ ಶುಕ್ರವಾರ ನಡೆಯಿತು.ಸಂಘದ ಅಧ್ಯಕ್ಷ ಚಂದ್ರಶೇಖರ್ ಖಾರ್ವಿ,ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಯಾನ,ಮುಖ್ಯ ಶಿಕ್ಷಕಿ ಸಿಸ್ಟರ್ ಕ್ರಸೆನ್ಸ್ ಉಪಸ್ಥಿರಿದ್ದರು.ಶಿಕ್ಷಣ ಸಮನ್ವಯಾಧಿಕಾರಿ ಬಿಆರ್‍ಸಿ ಕಚೇರಿ ಕುಂದಾಪುರ ಅಶೋಕ್ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಪ್ರಸ್ತುತ ಸಾಲಿನ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಖಾರ್ವಿ,ವಿಶಾಲಾಕ್ಷಿ,ನವೀನ್ ಶೆಟ್ಟಿ,ಮರಿಯಾ ಡಿ ಅಲ್ಮೇಡಾ,ರೇಖಾ,ರೇಣುಕಾ ಸದಸ್ಯರಾಗಿ ಆಯ್ಕೆಯಾದರು.ಶಿಕ್ಷಕಿ ಶಾಂತಿ ಕ್ರಾಸ್ತ ನಿರೂಪಿಸಿದರು.ಜುನಿತ ವಂದಿಸಿದರು.

ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ

ಕುಂದಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನ ಜಾಗೃತಿ ವೇದಿಕೆ ಅವರ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ತಾಲೂಕಿನ ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಕಾರ್ಯಕ್ರಮ ಶ್ರೀಮಹಾರಾಜ ಸ್ವಾಮಿ ವರಹಾ ದೇವಸ್ಥಾನ ಮರವಂತೆಯಲ್ಲಿ ನಡೆಯಿತು.ಮಾಜಿ ಶಾಸಕ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್,ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಘುರಾಮ ಕೆ ಪೂಜಾರಿ ಮತ್ತು ನೂತನ ಅಧ್ಯಕ್ಷ ವಾಸು ಮೇಸ್ತ,ಜನಜಾಗೃತಿ ಅಧ್ಯಕ್ಷ ಸುಧಾಕರ […]

You cannot copy content of this page