ಬಿರುಸುಗೊಂಡ ಮಳೆ,ನಾವುಂದ ಸಾಲ್ಬುಡದಲ್ಲಿ ಕೃಷಿ ಭೂಮಿಗಳು ಜಲಾವೃತ
ಕುಂದಾಪುರ:ಬೈಂದೂರು ತಾಲೂಕಿನ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದ ಸೌಪರ್ಣಿಕಾ ನದಿಯಲ್ಲಿ ನೀರಿ ಮಟ್ಟ ಏರಿಕೆ ಆಗಿದ್ದರ ಪರಿಣಾಮ ನಾವುಂದ ಸಾಲ್ಬುಡದಲ್ಲಿ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು,ಸಂಪರ್ಕ ರಸ್ತೆ ಮುಳುಗಡೆ ಆಗಿದೆ.ಸೌಪರ್ಣಿಕಾ ನದಿ ತೀರ ಪ್ರದೇಶಗಳಾದ ಸಾಲ್ಬುಡ,ಪಡುಕೋಣೆ,ಮರವಂತೆ,ಕಡಿಕೆ,ಹಡವು,ತೆಂಗಿನಗುಂಡಿ,ಸೇನಾಪುರ,ದೇವಳಿ,ಆನಗೋಡು,ಬಂಟ್ವಾಡಿ ಹಾಗೂ ಚಕ್ರ ನದಿ ತೀರ ಪ್ರದೇಶಗಳಾದ ಹಕ್ಲಾಡಿ ಗ್ರಾಮದ ಯಳೂರು,ತೊಪ್ಲು ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ. (ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಬೈಂದೂರು ಅಗ್ನಿ ಶಾಮಕದಳದ ಸಿಬ್ಬಂದಿಗಳು […]