ಉಪ್ಪುಂದ ಕರ್ಕಿಕಳಿಯಲ್ಲಿ ದೋಣಿ ದುರಂತ;ಓರ್ವ ಮೀನುಗಾರ ಸಾವು,ಇನ್ನೊಬ್ಬ ನಾಪತ್ತೆ
ಕುಂದಾಪುರ:ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಅಲೆಯ ರಭಸಕ್ಕೆ ನಾಡದೋಣಿಯೊಂದು ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಮೃತ ಪಟ್ಟಿದ್ದು,ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವ ಹಿನ್ನೆಲೆಯಲ್ಲಿ 8 ಜನರಿದ್ದ ಮೀನುಗಾರರ ತಂಡ ನಾಡದೋಣಿ ಮೂಲಕ ಸಮುದ್ರಕ್ಕೆ ತೆರಳಿದ್ದಾರೆ,ಮೀನುಗಾರಿಕೆ ಮುಗುಸಿಕೊಂಡು ಮರಳಿ ದಡಕ್ಕೆ ಬರುತ್ತಿರುವ ಸಂದರ್ಭದಲ್ಲಿ ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿದ ನಾಡದೋಣಿ ಮಗುಚಿ ಬಿದ್ದಿದೆ.ದೋಣಿ ದುರಂತದಲ್ಲಿ ನಾಗೇಶ್ ಖಾರ್ವಿ (30) ಮೃತ ಪಟ್ಟಿದ್ದಾರೆ,ಸತೀಶ್ […]