ವರಾಹ ಮತ್ತು ಗಂಗಾಧರೇಶ್ವರ ದೇವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾಯ
ಬೈಂದೂರು:ಮರವಂತೆ ವರಾಹ ದೇವಸ್ಥಾನದಿಂದ ಗಂಗಾಧರೇಶ್ವರ ದೇವಸ್ಥಾನದವರೆಗೆ ಸೌಪರ್ಣಿಕಾ ನದಿ ತೀರ ಪ್ರದೇಶದಲ್ಲಿ ನಿರ್ಮಿಸಿದ ಸಂಪರ್ಕ ರಸ್ತೆ ನದಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು ಲಕ್ಷಾಂತರ.ರೂ ನಷ್ಟ ಸಂಭವಿಸಿದೆ.ಸಣ್ಣ ನೀರಾವರಿ ಇಲಾಖೆ ಅನುದಾನದಡಿ 1.20 ಕೋಟಿ.ರೂ ವೆಚ್ಚದಲ್ಲಿ ಕಳೆದ ಸಾಲಿನಲ್ಲಿ ನಿರ್ಮಾಣಗೊಂಡಿದ್ದ 300 ಮೀಟರ್ ವರೆಗಿನ ಸಂಪರ್ಕ ರಸ್ತೆ ಮಳೆ ನೀರಿನ ಹೊಡೆತಕ್ಕೆ ಕಾಣದಂತೆ ಮಾಯವಾಗಿದೆ.ಗುತ್ತಿಗೆದಾರರ ನಿರ್ಲಕ್ಷ್ಯ ತನ ಮತ್ತು ಅವೈಜ್ಞಾನಿಕ ಕಾಮಗಾರಿ ಫಲವಾಗಿ ಮರವಂತೆ ವರಾಹ ದೇವಸ್ಥಾನ ಮತ್ತು ಗಂಗಾಧರೇಶ್ವರ ದೇವಸ್ಥಾನಕ್ಕೆ ಸಂಪರ್ಕ ಬೇಸುವ ರಸ್ತೆ ಮಳೆ […]