ಸಮುದ್ರದಲ್ಲಿ ನಾಪತ್ತೆ ಆಗಿದ್ದ,ಸತೀಶ್ ಖಾರ್ವಿ ಶವ ಪತ್ತೆ

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ಕಡಲ ತೀರದ ಬಳಿ ಸೋಮವಾರ ನಾಡದೋಣಿ ಮೂಲಕ ಮೀನುಗಾರಿಕೆ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಕಡಲ ಅಲೆಯ ಅಬ್ಬರಕ್ಕೆ ದೋಣಿ ಮಗುಚಿದ ಪರಿಣಾಮ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಸತೀಶ್ ಖಾರ್ವಿ (30) ಅವರ ಮೃತ ದೇಹ ಕೊಡೇರಿ ಬಂದರು ಸಿವಾಕ್ ಬಳಿ ಮಂಗಳವಾರ ರಾತ್ರಿ ಪತ್ತೆ ಆಗಿದೆ.ನಾಡದೋಣಿ ಮೂಲಕ ಮೀನುಗಾರಿಕೆಯಲ್ಲಿ ತೊಡಗಿಕೊಂಡು ದಡಕ್ಕೆ ಮರಳಿ ಬರುತ್ತಿರುವ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಬಿದ್ದದರಿಂದ ದೋಣಿಯಲ್ಲಿದ್ದ 7 ಜನರ ಮೀನುಗಾರರ ಪೈಕಿ 5 ಜನ […]

ಜನ ಸೇವೆ ಮಾಡಲು ಸಿದ್ದರಿಲ್ಲದಿದ್ದವರು ಸ್ಥಾನ ತ್ಯಾಗ ಮಾಡಿ-ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ

ಉಡುಪಿ:ಜನರ ಕೆಲಸ ಮಾಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು ಪಕ್ಷ ರಾಜಕಾರಣ ಚುನಾವಣೆ ವೇಳೆ ಮಾತ್ರ.ಅಧಿಕಾರಿಗಳು ನಿರ್ಲಕ್ಷ್ಯ,ಉದಾಶೀನ ತೋರಿಸಿದರೆ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡದಿದ್ದರೆ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಸಹಿಸಲು ಸಾಧ್ಯವಿಲ್ಲ,ಜನ ಸೇವೆ ಮಾಡಲು ಸಿದ್ದರಿಲ್ಲದಿದ್ದವರು ಸ್ಥಾನ ತ್ಯಾಗ ಮಾಡಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದರು.ಉಡುಪಿ ಜಿಲ್ಲಾ ಪಂಚಾಯತ್‍ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿದ ಸಿಎಂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ […]

ಸಚಿವ ಮಂಕಾಳ ವೈದ್ಯ ಉಪ್ಪುಂದಕ್ಕೆ ಭೇಟಿ, ಪರಿಹಾರದ ಚೆಕ್ ವಿತರಣೆ

ಕುಂದಾಪುರ:ದೋಣಿ ದುರಂತ ಸಂಭವಿಸಿ ಓರ್ವ ಮೀನುಗಾರ ಮೃತರಾಗಿದ್ದು,ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿಗೆ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ,ಮೀನುಗಾರರ ಮನೆಗೆ ತೆರಳಿದ ಅವರು ಸಾಂತ್ವನದ ಮಾತುಗಳನ್ನು ಹೇಳಿದರು,ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಾಜು ಪೂಜಾರಿ,ಪ್ರಕಾಶ್‍ಚಂದ್ರ ಶೆಟ್ಟಿ,ಮದನ್ ಕುಮಾರ್,ಮೀನುಗಾರ ಮುಖಂಡರುಗಳು […]

You cannot copy content of this page