ಆಲೂರು-ಇಂಬಳಹೊಳೆ ರಸ್ತೆ ಅಭಿವೃದ್ಧಿಗೆ ಆಗ್ರಹ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲೂರು ಇಂಬಳಹೊಳೆಯಿಂದ ಬಡಾಕೆರೆ ನಾವುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಂಬಳಹೊಳೆ ಎಂಬಲ್ಲಿ ಸುಮಾರು 500 ಮೀಟರ್ ವರೆಗೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.ಕಚ್ಚಾ ರಸ್ತೆಯಲ್ಲಿ ಮಳೆಗಾಲದಲ್ಲಿ ಸಾಗುವುದೇ ದುಸ್ತರವಾಗಿದ್ದು ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಕಾಡಂಚಿನ ಪ್ರದೇಶವಾದ ಆಲೂರು ಇಂಬಳಹೊಳೆ ಮುಖ್ಯ ರಸ್ತೆಯು ಆಲೂರು ಪೇಟೆ ಮತ್ತು ನಾವುಂದ-ಬಡಾಕೆರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.ಆಲೂರು ಇಂಬಳ ಹೊಳೆ ರಸ್ತೆಯಲ್ಲಿ ದಿನಂಪತ್ರಿ ನೂರಾರು ವಾಹನಗಳು ಸಂಚರಿಸುತ್ತವೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಸ್ತೆಯನ್ನು […]

ಚಂಡಮಾರುತದ ಅಬ್ಬರಕ್ಕೆ ದಕ್ಷಿಣ ಬ್ರೆಜಿಲ್ ನಲ್ಲಿ 8 ಮಂದಿಸಾವು

ಕುಂದಾಪುರ:ದಕ್ಷಿಣ ಬ್ರೆಜಿಲ್ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಉಷ್ಣವಲಯದ ಚಂಡಮಾರುತದಿಂದ ಸತ್ತವರ ಸಂಖ್ಯೆ ಎಂಟಕ್ಕೆ ಏರಿದ್ದು, 19 ಜನರು ನಾಪತ್ತೆಯಾಗಿದ್ದಾರೆ.40 ಪುರಸಭೆಗಳ ವ್ಯಾಪ್ತಿಯಲ್ಲಿ ಭೂಕುಸಿತ,ಪ್ರವಾಹ ಮತ್ತು ವಿದ್ಯುತ್ ಉಂಟಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.ಒಟ್ಟು 2,330 ಜನರನ್ನು ಸ್ಥಳಾಂತರಿಸಲಾಗಿದೆ.

ಬಿಸಿಲಿನ ತಾಪಕ್ಕೆಬಿಹಾರದಲ್ಲಿ 27 ಮಂದಿ ಸಾವು

ಕುಂದಾಪುರ:ಬಿಹಾರದಲ್ಲಿ ಬಿಸಿಲಿನ ತೀವ್ರತೆಯಿಂದ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಭೋಜ್‌ಪುರ ಜಿಲ್ಲೆಯಲ್ಲಿ ಆರು ಮಂದಿ, ರೋಹ್ತಾಸ್,ಬಂಕಾ ಮತ್ತು ಅರ್ವಾಲ್‌ನಲ್ಲಿ ತಲಾ ನಾಲ್ವರು,ಔರಂಗಾಬಾದ್‌ನಲ್ಲಿ ಮೂವರು ಮತ್ತು ನಲಂದಾ, ಜಮುಯಿ, ಜಹಾನಾಬಾದ್, ಭಾಗಲ್ಪುರ, ಗಯಾ ಮತ್ತು ಪಾಟ್ನಾದಲ್ಲಿ ತಲಾ ಒಬ್ಬರು ಬಿಸಿಗಾಳಿಗೆ ಸಾವನ್ನಪ್ಪಿದ್ದಾರೆ. ಶನಿವಾರ ಪಾಟ್ನಾದಲ್ಲಿ ಗರಿಷ್ಠ ತಾಪಮಾನ 44.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶೇಖ್‌ಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ 45.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.ಮುಂದಿನ 24 ಗಂಟೆಗಳ ಕಾಲ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ […]

You cannot copy content of this page