ನಾಪತ್ತೆ ಆದ ಶರತ್ ಗಾಗಿ,ಡ್ರೋನ್ ಕ್ಯಾಮೆರಾದ ಮೂಲಕ ಶೋಧ
ಕುಂದಾಪುರ:ಬೈಂದೂರು ತಾಲೂಕಿನ ಕೊಲ್ಲೂರು ಅರಶಿನಗುಂಡಿ ಎಂಬಲ್ಲಿ ಜಲಪಾತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಭಾನುವಾರ ನಾಪತ್ತೆ ಆದ ಭದ್ರಾವತಿ ಮೂಲದ ನಿವಾಸಿ ಶರತ್‍ಗಾಗಿ ಜಲಪಾತದ ಆಸುಪಾಸಿನ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಬಿಟ್ಟು ಹುಡುಕಾಟವನ್ನು ತೀವೃಗೊಳಿಸಲಾಗಿದೆ.ಕೊಲ್ಲೂರು ಅರಶಿನಗುಂಡಿ ಜಲಪಾತಕ್ಕೆ ಬಿದ್ದು ಕಣ್ಮರೆಯಾಗಿ ಆರು ದಿನಗಳಾದರು ಶರತ್ (22) ಗುರುತು ಇನ್ನೂ ಪತ್ತೆ ಆಗಿಲ್ಲ.ಮಗನ ಬರುವಿಕೆಗಾಗಿ ಹೆತ್ತವರು ಜಾತಕ ಪಕ್ಷಿ ಅಂತೆ ಕಾದು ಕುಳಿತಿದ್ದು,ಶರತ್ ಬದುಕಿದ್ದಾನೆ ಎನ್ನುವುದು ಪೋಷಕರ ನಂಬಿಕೆ ಆಗಿದೆ.ಶರತ್‍ಗಾಗಿ ಇನ್ನಿಲ್ಲದ ಹುಡುಕಾಟವನ್ನು ಮಾಡಿದ್ದ ಪೊಲೀಸ್ ಇಲಾಖೆ ಶುಕ್ರವಾರ […]