ಕೊಡೇರಿಯಲ್ಲಿ ದೋಣಿ ದುರಂತ,9 ಮೀನುಗಾರರು ಪಾರು
ಬೈಂದೂರು:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಂದರಿನ ಸುಮಾರು ಐದು ನಾಟಿಕಲ್ ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ನಾಡದೋಣಿಯೊಂದು ಸಮುದ್ರ ಅಲೆಯ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದ್ದು,ದೋಣಿಯಲ್ಲಿದ್ದ 9 ಜನ ಮೀನುಗಾರರು ಪಾರಾಗಿದ್ದಾರೆ.ಬಲೆ,ದೋಣಿಯಲ್ಲಿನ ಇಂಜಿನ್‍ಗೆ ಹಾನಿಯಾಗಿದೆ.ಅಂದಾಜು 2.ಲಕ್ಷ.ರೂ ನಷ್ಟ ಉಂಟಾಗಿದ್ದ ಘಟನೆ ಶುಕ್ರವಾರ ನಡೆದಿದೆ.ಉಪ್ಪುಂದ ಗ್ರಾಮದ ಪಾಳ್ಯದರ ತೋಪ್ಲು ಪುರ್ಶುಯ್ಯನ ಪುಂಡಲೀಕ ಎನ್ನುವವರ ಮಾಲಿಕತ್ವದ ಶ್ರೀದುರ್ಗಾಪರಮೇಶ್ವರಿ ಎನ್ನುವ ದೋಣಿಯಲ್ಲಿ ಶುಕ್ರವಾರ 9 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಅಲೆಯ ಹೊಡೆತಕ್ಕೆ ಸಿಲುಕಿದ ದೋಣಿ ಪಲ್ಟಿ ಹೊಡೆದು […]