ಬಿತ್ತೋತ್ಸವ ಕಾರ್ಯಕ್ರಮ,ಬೀಜದ ಉಂಡೆ ಬಿತ್ತನೆ

ಕುಂದಾಪುರ:ಕರ್ನಾಟಕ ಅರಣ್ಯ ಇಲಾಖೆ,ಮಂಗಳೂರು ವೃತ್ತ,ಕುಂದಾಪುರ ವಿಭಾಗ ಮತ್ತು ಕುಂದಾಪುರ ವಲಯ ಹಾಗೂ ಸರಕಾರಿ ಪ್ರೌಢಶಾಲೆ ಆಲೂರು,ಆಶಯ ಇಕೊ ಕ್ಲಬ್,ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬಿತ್ತೋತ್ಸವ ಮತ್ತು ವನಮಹೋತ್ಸವ ಕಾರ್ಯಕ್ರಮ ಆಲೂರು ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆಯಿತು.ಆಲೂರು ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ,ಉಪಾಧ್ಯಕ್ಷ ರವಿ ಶೆಟ್ಟಿ,ಅರಣ್ಯ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ,ಚಂದ್ರಶೇಖರ ಶೆಟ್ಟಿ,ಅರಣ್ಯಾಧಿಕಾರಿ ದೀಲಿಪ್,ಗ್ರಾ.ಪಂ ಸದಸ್ಯರುಗಳು,ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು,ಶಾಲಾ ಮುಖ್ಯೋಪಾಧ್ಯಾಯರು,ಶಿಕ್ಷಕ ವೃಂದವರು ಉಪಸ್ಥಿತಿದ್ದರು.ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು,ಪರಿಸರದಲ್ಲಿ ಬೀಜದ ಉಂಡೆಗಳನ್ನು ಬಿತ್ತಲಾಯಿತು.

ಟೀ ಡೇ ಕೆಫೆ ಪ್ರಾರಂಭೋತ್ಸವ

ಕುಂದಾಪುರ:ಬೆಂಗಳೂರು ಹೊಂಗಸಂದ್ರ ಬೊಮ್ಮನಹಳ್ಳಿಯಲ್ಲಿ ಸೊಹನ್ ಶೆಟ್ಟಿ ಮೊಳಹಳ್ಳಿ ಮತ್ತು ಡಾ.ಬಿಪಿನ್ ಶೆಟ್ಟಿ ಮೊಳಹಳ್ಳಿ ಅವರ ಪಾಲುದಾರಿಕೆಯಲ್ಲಿ ನೂತನವಾಗಿ ಆರಂಭಗೊಂಡ ಟೀ ಡೇ ಕೆಫೆ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರು ಟೀ ಡೇ ಕೆಫೆಯನ್ನು ಉದ್ಘಾಟಿಸಿ ಮಾತನಾಡಿ ನವ ಉದ್ಯಮ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಟೀ ಡೇ ಕೆಫೆ ಪಾಲುದಾರರಾದ ಸೋಹನ ಶೆಟ್ಟಿ ಮೊಳಹಳ್ಳಿ,ಡಾ.ಬಿಪಿನ್ ಶೆಟ್ಟಿ ಮೊಳಹಳ್ಳಿ ಮತ್ತು ಅರ್ಚಕರು,ಅವರ ಹಿತೈಷಿಗಳು ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ:ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಸಂಜೀವಿನಿ ಸಂಘದ ಎಂಬಿಕೆ ಚೈತ್ರ,ಎಲ್‍ಸಿಆರ್‍ಪಿ ವಸಂತಿ,ಸವಿತಾ,ವಿಮಲ,ಉದ್ಯೋಗ ಸಖಿ ನಾಗರತ್ನ,ಸಂಘದ ಸದಸ್ಯರು ಉಪಸ್ಥಿತರಿದ್ದರು.

You cannot copy content of this page