ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಬೈಕ್ ಅಪಘಾತ,ಮೂವರಿಗೆ ಗಾಯ

ಕುಂದಾಪುರ:ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಪಲ್ಟಿಯಾಗಿ ಬಿದ್ದ ಪರಿಣಾಮ ಸಾವರರಿಬ್ಬರಿಗೂ ಗಾಯವಾಗಿದೆ.ಸಹ ಸವಾರ ಸುರೇಶ್ ಜೋಗಿ ಬೈಂದೂರು ಎನ್ನುವ ವ್ಯಕ್ತಿಯೊಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಭಾನುವಾರ ನಡೆದಿದೆ.ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಅವೈಜ್ಞಾನಿಕತೆಯಿಂದ ಕೂಡಿದ ಮುಳ್ಳಿಕಟ್ಟೆ ಸರ್ಕಲ್ ಅನ್ನು ಸರಿ ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. (ಮುಳ್ಳಿಕಟ್ಟೆ ಸರ್ಕಲ್ ನಲ್ಲಿ […]

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ನೇಮಕ

ಬೆಂಗಳೂರು:ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಹಿಂದೆ ಡಿಜಿಐಜಿಪಿಯಾಗಿದ್ದ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೋಂಡಿದ್ದರಿಂದ,ತೆರವಾದ ಸ್ಥಾನಕ್ಕೆ ಅಲೋಕ್ ಮೋಹನ್ ಅವರನ್ನು ಸರಕಾರ ನಿಯೋಜಿಸಿದೆ.

ಹೆದ್ದಾರಿಗೆ ಬಂದ ನಾಗರ ಹಾವು,ಟಿಪ್ಪರ್‌ನೊಳಗೆ ನುಗ್ಗಿಆವಾಂತರ

ಉಡುಪಿ:ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಬಳಿ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದು ಪಾರ್ಕ್ ಮಾಡಿದ್ದ ಟಿಪ್ಪನೊಳಗೆ ಹೊಕ್ಕಿ ಆವಾಂತರ ಸೃಷ್ಟಿಸಿದ ಘಟನೆ ನಡೆದಿದೆ.ರಸ್ತೆಯನ್ನು ದಾಟುತ್ತಿದ್ದ ನಾಗರ ಹಾವು ವಾಹನಗಳ ಚಕ್ರದಡಿಗೆ ಸಿಲುಕದಂತೆ ರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯರು ಸುರಕ್ಷಿತ ಪ್ರದೇಶಕ್ಕೆ ತೆರಳಲು ದಾರಿ ಮಾಡಿಕೊಡುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ಬರುತ್ತಿದ್ದ ಟಿಪ್ಪರ್ ಚಾಲಕನೋರ್ವ,ಹಾವನ್ನು ರಕ್ಷಣೆ ಮಾಡುತ್ತಿರುವುದನ್ನು ವೀಕ್ಷಿಸಲು ತನ್ನಟಿಪ್ಪರನ್ನು ರಸ್ತೆ ಬದಿ ಪಾರ್ಕ್ ಮಾಡಿ ಬಂದಿದ್ದ.ಅಷ್ಟರಲ್ಲಿ ರಸ್ತೆ ದಾಟುತ್ತಿದ್ದ ಹಾವು ನೇರವಾಗಿ ಟಿಪ್ಪರ್ ಅಡಿಯಿಂದ ಮೇಲೇರಿ ಟಿಪ್ಪರ್ ಒಳಗೆ […]

You cannot copy content of this page