ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿ.ಎಸ್ ನೇಮಕ

ಕುಂದಾಪುರ:ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿ.ಎಸ್ ಅವರು ನೇಮಕಗೊಂಡಿದ್ದಾರೆ.ಈ ಹಿಂದೆ ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು.ಅಪರ ಜಿಲ್ಲಾಧಿಕಾರಿಯಾಗಿದ್ದ ವೀಣಾ ಬಿಎನ್ ಅವರು ವರ್ಗಾವಣೆಗೊಂಡಿದ್ದಾರೆ.

ಆನೆಗುಡ್ಡೆಗೆ ದೇವಳಕ್ಕೆ ನಟಿ ಮಾಲಾಶ್ರೀ ಭೇಟಿ

ಕುಂದಾಪುರ:ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಖ್ಯಾತ ಚಲನಚಿತ್ರ ನಟಿ ಮಾಲಾಶ್ರೀ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ದೇವಸ್ಥಾನದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು.ದೇವಾಲಯದ ಆಡೆಳಿತ ಮೊಕ್ತೇಸರರು,ಅರ್ಚಕರು,ಆಡಳಿತ ಮಂಡಳಿ ಸದಸ್ಯರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ

ಮಂಗಳೂರು:ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ ಘಟನೆ ಉಜಿರೆಯಲ್ಲಿ ನಡೆದಿದೆ.ಫೆಲಿಕ್ಸ್ ಎನ್ನುವವರ ಒಡೆತನದ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆ ನುಗ್ಗಿದ ಕಳ್ಳರು,15 ಪವನ್ ಚಿನ್ನ ಹಾಗೂ 20,000.ರೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.ಫೇಲಿಕ್ಸ್ ಅವರ ಮಗಳು ಕಾಲೇಜು ಮುಗಿಸಿ ಮಧ್ಯಾಹ್ನ ವೇಳೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಮನೆ ಮಾಲೀಕ ಫೇಲಿಕ್ಸ್ ಎನ್ನುವವರು ಕೆಲಸಕ್ಕೆ ತೆರಳಿದ್ದರು,ಪತ್ನಿ ಗ್ರೇಟಾ ಸ್ಥಳೀಯ ಶಾಲೆಯಲ್ಲಿ ಕೆಲಸಕ್ಕೆ ಹೋಗಿದ್ದರು.ಮನೆಯಲ್ಲಿ ಯಾರು […]

You cannot copy content of this page