ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟನೆ

ಕುಂದಾಪುರ:ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರಚದುರಂಗ ಸ್ಪರ್ಧೆ 2023-24 ಸರಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಚದುಮಕ್ಕಳ ಜೊತೆ ಶಾಸಕರು ಚದುರಂಗ ಸ್ಪರ್ಧೆ ಗೆ ಚಾಲನೆ ನೀಡಿ ಮಾತನಾಡಿ, ಸನಾತನ ಧರ್ಮದ ನಾಡದ ಭಾರತದ ಈ ಮಣ್ಣಿನಲ್ಲಿ ಜನ್ಮತಾಳಿದ ಪ್ರಖ್ಯಾತ ಆಟಗಳು ಎಲ್ಲವೂ ವಿದೇಶದಲ್ಲಿ ಪ್ರಖ್ಯಾತ ಗೊಂಡಿವೆ ನಮ್ಮ ನೆಲದಲ್ಲಿ ಹುಟ್ಟಿದ ಪಾರಂಪರಿಕ ಆಟಗಳನ್ನು ನಾವು ಮರೆಯುತ್ತಾ ಬಂದಿರುವುದು ವಿಷಾದನೀಯ ಸಂಗತಿ ಎಂದರು.ಗ್ರಾಮ […]

ಕರಾವಳಿ ಭಾಗದಲ್ಲಿ ಕೈ ಕೊಟ್ಟ ಮಳೆ

ಕುಂದಾಪುರ:ಅಬ್ಬರಿಸಿ ಸುರಿದ ಮಳೆ ಕಳೆದ ಒಂದು ವಾರದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗಗಳಲ್ಲಿ ಕೈ ಕೊಟ್ಟಿದೆ.ಮಳೆ ಕುಂಠಿತವಾಗಿದ್ದರಿಂದ ನೀರಿನ ಹರಿವು ಇಲ್ಲದೆ ಮಕ್ಕಿ ಗದ್ದೆಗಳು (ಒಣಭೂಮಿ) ನೀರಿಲ್ಲದೆ ಒಣಗಿ ಹೋಗಿದ್ದು ಆರಂಭಿಕ ಹಂತದಲ್ಲಿಯೆ ಭತ್ತದ ಬೆಳೆ ಸೊರಗಿದೆ.ಆಗಷ್ಟ್ ತಿಂಗಳಿನಲ್ಲಿ ಧಾರಾಕಾರವಾಗಿ ಸುರಿಯ ಬೇಕಿದ್ದ ಮಳೆ,ವಾಡಿಕೆ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದು ದಿನವಿಡಿ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ.ಮಳೆ ಚೆನ್ನಾಗಿ ಸುರಿದರೆ ಮಾತ್ರ ಬೇಸಾಯ ಕೈಹಿಡಿಯಲ್ಲಿದೆ ಎಂದು ರೈತರು ಹೇಳುತ್ತಾರೆ.

ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ

ಕುಂದಾಪುರ:ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಮತ್ತು ಎಸ್‍ಎಲ್‍ಆರ್‍ಎಂ ಘಟಕ ಹೊಸಾಡು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಮೊವಾಡಿ ಸಂಪರ್ಕ ರಸ್ತೆಯ ಅಕ್ಕಪಕ್ಕದಲ್ಲಿ ಬಿದ್ದ ಕಸವನ್ನು ಸಂಗ್ರಹಿಸಿ ಎಸ್‍ಎಲ್‍ಆರ್‍ಎಂ ಘಟಕಕ್ಕೆ ರವಾನಿಸಲಾಯಿತು.ಈ ಸಂದರ್ಭ ಸಂಜೀವಿನಿ ಒಕ್ಕೂಟದ ಎಂಬಿಕೆ,ಎಲ್‍ಸಿಆರ್‍ಪಿ,ಕೃಷಿ ಉದ್ಯೋಗ ಸಖಿ ಮತ್ತು ಸದಸ್ಯರು,ಎಸ್‍ಎಲ್‍ಆರ್‍ಎಂ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಮೊವಾಡಿ ಸಂಪರ್ಕ ರಸ್ತೆ ಬದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಸವನ್ನು ಎಸೆದು ಹೋಗುವ ಪ್ರವೃತ್ತಿ ಆಧಿಕವಾಗುತ್ತಿದ್ದು ಈ ಬಗ್ಗೆ ಕ್ರಮ ಸೂಕ್ತ ಕೈಗೊಳ್ಳಬೇಕೆಂದು ಸಂಜೀವಿನಿ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.

You cannot copy content of this page