ಬಿಜೆಪಿಗೆ ಮತ ಹಾಕುವವರು ರಾಕ್ಷಸರು:ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ವಿವಾದಾತ್ಮಕ ಹೇಳಿಕೆ
ಬೆಂಗಳೂರು:ಹರಿಯಾಣದ ಕೈದಾಲ್ನಲ್ಲಿ ಭಾನುವಾರ ನಡೆದ ಜನಕ್ರೋಶ ಸಭೆಯಲ್ಲಿ ಮಾತನಾಡಿದ ಕಾಂಗ್ರಸ್ ಪಕ್ಷದ ಮುಖಂಡ ರಣದೀಪ್ ಸುರ್ಜೇವಾಲಾ ಬಿಜೆಪಿ ನಾಯಕರು,ಬಿಜೆಪಿಗೆ ಮತ ಹಾಕುವವರು ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬಿಜೆಪಿಗೆ ಮತ ಹಾಕುವವರು ಮತ್ತು ಬಿಜೆಪಿ ಬೆಂಬಲಿಗರು ಅವರು ರಾಕ್ಷಸ ಸ್ವಭಾವದವರು.ನಾನು ಅವರನ್ನು ಇಂದು ಮಹಾಭಾರತದ ಈ ಭೂಮಿಯಿಂದ ಶಪಿಸುತ್ತೇನೆ,ಮಹಾಭಾರತ ನಡೆದ ಸ್ಥಳದಿಂದ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.ಸುರ್ಜೇವಾಲ ಅವರ ಈ ವಿವಾದಾತ್ಮಕ ವಿಡಿಯೋ ವೈರಲ್ ಆಗಿದೆ.























































































































































































































































































































































































































































































































































































































































































































































































































































































































































































































































































































































































































































































































































































































































































