ಆಗಸ್ಟ್ 21.ರಂದು ಶ್ರೀ ನಾಗಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

ಕುಂದಾಪುರ:ಹೊಸಾಡು ಗ್ರಾಮದ ಅರಾಟೆ –ಮುಳ್ಳಿಕಟ್ಟೆ ಶ್ರೀ ನಾಗಕನಿಕಾ ಪರಮೇಶ್ವರಿ ದೇವಸ್ಥಾನ ಹಣಿಮಕ್ಕಿಯಲ್ಲಿ ಆಗಸ್ಟ್ 21 ರಂದು ಸೋಮವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಗರ ಪಂಚಮಿ ಹಬ್ಬ ಜರುಗಲಿದೆ.ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜಾಭಿಷೇಕ,ಮಂಗಳಾರತಿ ಹಾಗೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಪ್ರಸಾದ ವಿತರಣೆ ನಡೆಯಲಿದೆ.ದೇವಸ್ಥಾನದಲ್ಲಿ ನಡೆಯಲಿರುವ ದೇವತಾ ಕಾರ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದವರು ಕೇಳಿಕೊಂಡಿದ್ದಾರೆ. (ಹೊಸಾಡು ಗ್ರಾಮದ ಅರಾಟೆ –ಮುಳ್ಳಿಕಟ್ಟೆ […]

ಮುಳುಗುಜ್ಞ ದಿನೇಶ ಖಾರ್ವಿಗೆ ಸನ್ಮಾನ

ಕಾರವಾರ:ಮುದಗ ನಿರಾಶ್ರಿತರ ಹಾಗೂ ಸ್ಥಳೀಯ ಬೋಟ್ ಮಾಲೀಕರ ಸಂಘದ ವತಿಯಿಂದ ಸಮಾಜ ಸೇವಕ ಮುಳುಗುತಜ್ಞ ದಿನೇಶ ಖಾರ್ವಿ ಗಂಗೊಳ್ಳಿ ಅವರನ್ನು ಕಾರವಾರದ ಸಂಘದ ಕಛೇರಿಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.ನಿರಾಶ್ರಿತರ ಹಾಗೂ ಸ್ಥಳೀಯ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಯಶ್ವಂತ ಖಾರ್ವಿ,ಉಪಾಧ್ಯಕ್ಷ ದಾಮೋದರ ಜಂಗಾ ತಾಂಡೇಲ,ದೇವದಾಸ ದುರ್ಗೇಕರ್,ಗಣೇಶ ಸಿ.ಕೆ,ಶ್ರೀಕಾಂತ ಪಾಟ ತಾಂಡೇಲ, ಅಶೋಕ ಹರಿಕಾಂತ,ಗಿರಿಧರ ಈರಾ ತಾಂಡೇಲ,ಮಾರುತಿ ನಾರಾಯಣ ಹರಿಕಾಂತ,ಜಯವಂತ ನಾರಾಯಣ ಹರಿಕಾಂತ,ಮಹಾಬಲೇಶ್ವರ ರಾಮ ಹರಿಕಾಂತ ಮುದಗ ಆಮದಳ್ಳಿ,ಜಗದೀಶ ಉಪಸ್ಥಿತರಿದ್ದರು.

ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘಕ್ಕೆ ಪ್ರಶಸ್ತಿ

ಕುಂದಾಪುರ:2022-23ನೇ ಸಾಲಿನಲ್ಲಿ ಸಹಕಾರ ಕ್ಷೇತ್ರದ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘವನ್ನು ಗುರುತಿಸಿ ಗೌರವಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ಸದಾಶಿವ ಖಾರ್ವಿ ಮತ್ತು ಉಪಾಧ್ಯಕ್ಷ ಸೂರಜ್ ಖಾರ್ವಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿದರು.ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ […]

You cannot copy content of this page