ಗೋಡಂಬಿ ಸಂಸ್ಕರಣ ಉದ್ಯಮಗಳ ಬೇಡಿಕೆ ಈಡೇರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ.
ಕುಂದಾಪುರ:ಆರ್ಥಿಕ ಸಂಕಷ್ಟದಲ್ಲಿರುವ ಕರಾವಳಿ ಭಾಗದ ಗೋಡಂಬಿ ಸಂಸ್ಕರಣಾ ಉದ್ಯಮಗಳ ಬೇಡಿಕೆ ಈಡೇರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿ ಮಾತುಕತೆ ನಡೆಸಿದರು. ಗೋಡಂಬಿ ಸಂಸ್ಕರಣಾ ಉದ್ಯಮ ಎದುರಿಸುತ್ತಿರುವ ಎರಡೆರಡು ಇಎಂಐ ಪಾವತಿಯ ಭಾರದ ಬಗ್ಗೆ ವಿತ್ತ ಸಚಿವರ ಗಮನ ಸೆಳೆದ ಸಂಸದರು.ಈ ಸಂಬಂಧ ಮಧ್ಯ ಪ್ರವೇಶಿಸಿ ಇಎಂಐ ಭಾರ ಕಡಿಮೆ ಮಾಡಲು ವಿನಂತಿಸಿದರು.ಕರಾವಳಿ ಕರ್ನಾಟಕ ಭಾಗ ಗೋಡಂಬಿ ಸಂಸ್ಕರಣಾ ಉದ್ಯಮಗಳ ಕೇಂದ್ರವಾಗಿದ್ದು, […]