ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಛಾಯಾ ಪೂಜಾರಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಉಡುಪಿ ಅವರ ಜಂಟಿ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಛಾಯಾ ಸಿ ಪೂಜಾರಿ ಅವರು ವಿಜೇತರಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಚಂದ್ರಯಾನ -3 ತಂಡದಲ್ಲಿ ಕುಂದಾಪುರದ-ಮಂಕಿ ಯುವ ವಿಜ್ಞಾನಿ ಆಕಾಶ್ ಶೆಟ್ಟಿ

ಕುಂದಾಪುರ:ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಗೊಂಡು ಲ್ಯಾಂಡರ್‍ನ ಸಾಫ್ಟ್ ಲ್ಯಾಂಡಿಂಗ್ ಬುಧವಾರ ಯಶಸ್ವಿಯಾಗಿ ನೆರವೇರಿದೆ.ಚಂದ್ರಯಾನ-3 ಟೀಮ್‍ನಲ್ಲಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮಂಕಿ ಕೇಳಾಮನೆ ನಿವಾಸಿ ಪಾರ್ವತಿ ಶೆಟ್ಟಿ ಮತ್ತು ಕೆರಾಡಿ ಗ್ರಾಮದ ಚಪ್ಪರಮಕ್ಕಿ ದಿ.ಅಶೋಕ್ ಶೆಟ್ಟಿ ಅವರ ಮಗ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇರುವುದು ಕುಂದಾಪುರ ತಾಲೂಕಿಗೆ ಹೆಮ್ಮ. ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇಸ್ರೋ ಚಂದ್ರಯಾನ-3 ರಲ್ಲಿ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್‍ನಲ್ಲಿ ಪ್ರೋಜೆಕ್ಟ್ ಮ್ಯಾನೇಂಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಯೋಜನೆಯ […]

ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ-ಭಾರತೀಯರು ಸಂಭ್ರಮಾಚರಣೆ

ಬೆಂಗಳೂರು-ವಿಶ್ವದಾದ್ಯಂತ ಬಹಳಷ್ಟು ಕುತೂಹಲ ಮೂಡಿಸಿದ ಭಾರತೀಯರ ಮಹತ್ವಾಕಾಂಕ್ಷಿಯ ಚಂದ್ರಯಾನ -3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿ ನೆರವೇರಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇಸ್ರೋ ವಿಜ್ಞಾನಿಗಳು, ಭಾರತೀಯರು ಸಂಭ್ರಮಾಚರಣೆಯನ್ನು ಮಾಡಿದರು.ಚಂದ್ರಯಾನ -3 ಉಡಾವಣೆ ಯಶಸ್ವಿನ ಹಾದಿಯಲ್ಲಿದ್ದ ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಅನ್ನು ಇಳಿಸಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಮಹತ್ವದ ಕೆಲಸವಾಗಿತ್ತು.ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವುದರ ಮುಖೇನ ಶತಕೋಟಿ ಭಾರತೀಯರ ಹಾರೈಕೆ ಫಲಿಸಿದೆ.ಬಹುತೇಕ ಕಾಲ ಕತ್ತಲೆ ಇರುವ ದಕ್ಷಿಣ ಧ್ರುವದಲ್ಲಿ ಇದುವರೆಗೆ ಯಾರೂ ಸಂಶೋಧನೆ ಮಾಡಲು ಮುಂದಾಗದ […]

You cannot copy content of this page