ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರದಲ್ಲಿ ನಾಪತ್ತೆ

ಬೈಂದೂರು:ಕೈರಂಪಣಿ ಮೀನುಗಾರಿಕೆಗೆ ಮಾಡಲು ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ಭಾನುವಾರ ಸಂಜೆ ಅಳ್ವೆಗದ್ದೆಯಲ್ಲಿ ನಡೆದಿದೆ.ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಂದು ಸಮುದ್ರಕ್ಕೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣ ಅಪ್ಪಳಿಸಿದ ಬಾರಿ ಅಲೆಯ ಹೊಡೆತಕ್ಕೆ ಇಬ್ಬರು ಮೀನುಗಾರರು ಆಯತಪ್ಪಿ ಕಡಲಿಗೆ ಬಿದ್ದು ನಾಪತ್ತೆ ಆಗಿದ್ದಾರೆ.ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಸ್ಥಳೀಯ ಮೀನುಗಾರರು […]

ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಉಪನಿರ್ದೇಶಕರ ಕಛೇರಿ ಬೈಂದೂರು,ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಜನತಾ ಪ್ರೌಢಶಾಲೆ ಹೆಮ್ಮಾಡಿ ಆಶ್ರಯದಲ್ಲಿ 2023-24ನೇ ಸಾಲಿನ ಬಾಲಕ-ಬಾಲಕಿಯರ ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಶುಕ್ರವಾರ ನಡೆಯಿತು.ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿ ಶುಭಹಾರೈಸಿದರು,ಜನತಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿ ದೇವಾಡಿಗ,ಕಟ್‍ಬೇಲ್ತೂರು ಗ್ರಾ.ಪಂ ಅಧ್ಯಕ್ಷೆ ವೈಶಾಲಿ,ಉಪಾಧ್ಯಕ್ಷ ಕೆ.ರಾಮ ಶೆಟ್ಟಿ,ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ,ಬೈಂದೂರು ವಲಯ ದೈ.ಶಿ.ಶಿ ಸಂಘದ ಕಾರ್ಯದರ್ಶಿ ಗುರುರಾಜ ಎಸ್,ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಹೆಗ್ಡೆ,ದೈ.ಶಿ.ಶಿ […]

ಹಿರಿಯ ಭಜಕ ಕೃಷ್ಣ ಮೊಗವೀರರಿಗೆ ಸನ್ಮಾನ

ಕುಂದಾಪುರ:ಶ್ರೀರಾಮ ಭಜನಾ ಮಂಡಳಿ ಅರಾಟೆ-ಹೊಸಾಡು ವತಿಯಿಂದ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಮಕ್ಕಳ ಕುಣಿತಾ ಭಜನೆ ಪಾದಾರ್ಪಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಭಜಕರಾದ ಕೃಷ್ಣ ಮೊಗವೀರ ಅರಾಟೆ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂಡಳಿ ಅರಾಟೆ-ಹೊಸಾಡು ಅಧ್ಯಕ್ಷ ಸುರೇಶ ಪೂಜಾರಿ,ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಅಧ್ಯಕ್ಷ ನಿತಿನ್ ವಿಠಲವಾಡಿ,ವಂಡ್ಸೆ ವಲಯಾಧ್ಯಕ್ಷ ಸಂತೋಷ ಪೂಜಾರಿ,ಎಂ.ಎಂ ಸುವರ್ಣ,ರಮೇಶ್ ಆಚಾರ್ಯ,ಸುಮತಿ,ರಘುರಾಮ ಶೆಟ್ಟಿ,ಶಂಕರ ಶೆಟ್ಟಿ,ರಾಮ ಪೂಜಾರಿ ಹಾಗೂ ಭಜನಾ ಮಂಡಳಿ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

You cannot copy content of this page