ಅಕ್ರಮ ಮರಳು ಸಾಗಾಟ:ಮೂರು ಟಿಪ್ಪರ್ ವಶಕ್ಕೆ

ಉಡುಪಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಜರುಗಿಸಬೇಕೆನ್ನುವುದು ನಾಗರಿಕರ ಆಗ್ರಹವಾಗಿದೆ. ಗಂಗೊಳ್ಳಿ:ಯಾವುದೇ ರೀತಿ ಪರವಾನಾಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ಕುಂದಾಪುರ ತಾಲೂಕಿನ ಮೊವಾಡಿ ಹಾಗೂ ತ್ರಾಸಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಹೇರಿಕೊಂಡು ಸಾಗಾಟ ಮಾಡುತ್ತಿದ್ದ […]

ಎಂ.ಭಾಸ್ಕರ ಪೈ ಗುಜ್ಜಾಡಿ ಪ್ರೌಢಶಾಲೆ ಶೌಚಾಲಯ ಧ್ವಂಸ: ಕ್ರಮಕ್ಕೆ ಆಗ್ರಹ

ಕುಂದಾಪುರ:ಗುಜ್ಜಾಡಿ ಗ್ರಾಮದ ಎಂ.ಭಾಸ್ಕರ್ ಪೈ ಸರಕಾರಿ ಪ್ರೌಢಶಾಲೆಯ ಶೌಚಾಲಯವನ್ನು ಶಾಲೆಯ ಪಕ್ಕದಲ್ಲಿದ್ದ ಖಾಸಗಿ ಜಾಗದ ಮಾಲೀಕರೊಬ್ಬರು ಶಾಲೆಗೆ ರಜೆ ಇದ್ದ ಸಂದರ್ಭ ಧ್ವಂಸ ಮಾಡಿ ನೆಲ ಸಮ ಮಾಡಿದ್ದಾರೆ ಎಂದು ಶಾಲೆಯ ಎಸ್‍ಡಿಎಂಸಿ ಸದಸ್ಯರು ದೂರಿದ್ದಾರೆ. ಸರಕಾರಿ ಶಾಲೆಗೆ ಸಂಬಂಧಿಸಿದ ಶೌಚಾಲಯವನ್ನು ಧ್ವಂಸ ಮಾಡಿದ ವ್ಯಕ್ತಿಗಳ ವಿರುದ್ಧವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರನ್ನು ನೀಡಲಾಗಿದೆ.ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು,ಹಳೆ ವಿದ್ಯಾರ್ಥಿ ಮತ್ತು ಎಸ್‍ಡಿಎಂಸಿ ಸಂಘದ ಪದಾಧಿಕಾರಿಗಳು,ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

ಸಮುದ್ರದಲ್ಲಿ ನಾಪತ್ತೆ ಆಗಿದ್ದ ಮೀನುಗಾರರ ಶವ ಪತ್ತೆ

ಬೈಂದೂರು:ಶಿರೂರು ಅಳ್ವೆಗದ್ದೆ ಎಂಬಲ್ಲಿ ಭಾನುವಾರ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಆಯತಪ್ಪಿ ಕಡಲಿಗೆ ಬಿದ್ದು ನಾಪತ್ತೆ ಆಗಿದ್ದ ಗಂಗೊಳ್ಳಿ ಮುಸಾಭ್ (22) ಹಾಗೂ ನಝಾನ್ (24) ಎನ್ನುವ ಯುವಕರಿಬ್ಬರ ಶವ ಸೋಮವಾರ ಮಂಜಾನೆ ಅಳ್ವೆಗದ್ದೆ ಕಡಲ ತೀರದಲ್ಲಿ ಪತ್ತೆಯಾಗಿದೆ.ಕಡಲಿನಲ್ಲಿ ನಾಪತ್ತೆ ಆಗಿದ್ದ ಯುವಕರಿಬ್ಬರ ಪತ್ತೆಗಾಗಿ ತೀವೃವಾದ ಶೋಧವನ್ನು ಮಾಡಲಾಗಿತ್ತು.ಮುಸಾಭ್ ಕಳೆದ ವಾರವಷ್ಟೆ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.ದುಬೈನಿಂದ ಊರಿಗೆ ಬಂದಿದ್ದ ನಝಾನ್:ಮೀನಿಗಾರಿಕೆ ತೆರಳಿದ್ದ ಸಂದರ್ಭ ಕಡಲಿಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದ ನಝಾನ್ ಅವರು ದುಬೈನ […]

You cannot copy content of this page